Home Featured-Articals ಸಾವಿರಾರು ಜನರ ಪ್ರಾಣವನ್ನ ಉಳಿಸಲು ತಾವು ಹುತಾತ್ಮರಾದ ಇಬ್ಬರು ಪೈಲೆಟ್-ಗಳು.

ಸಾವಿರಾರು ಜನರ ಪ್ರಾಣವನ್ನ ಉಳಿಸಲು ತಾವು ಹುತಾತ್ಮರಾದ ಇಬ್ಬರು ಪೈಲೆಟ್-ಗಳು.

1029
0

ಹೆಚ್. ಎ. ಎಲ್ ನಲ್ಲಿ ನಡೆದ ಯುದ್ಧ ವಿಮಾನ ದುರಂತದಲ್ಲಿ ಹುತಾತ್ಮರಾದ ಇಬ್ಬರು ಪೈಲೆಟ್ಗಳು ಸಾವಿರಾರು ಜನರ ಪ್ರಾಣ ಉಳಿಸಿ ಹುತಾತ್ಮರಾಗಿದ್ದಾರೆ,ರನ್ ವೇನಲ್ಲಿ ಕಾಣಿಸಿಕೊಂಡ ಕಾರಣ ಯುದ್ದ ವಿಮಾನಕ್ಕೆ ಬೆಂಕಿ ತಗುಲು ಇಬ್ಬರು ಹುತಾತ್ಮರಾಗಿದ್ದಾರೆ,ಅವರ ತ್ಯಾಗದ ಬಲಿದಾನವನ್ನ ಕೇಳಿದರೆ ಹೆಮ್ಮೆಯನ್ನಿಸುತ್ತದೆ.

ಒಂದು ವೇಳೆ ಅರ್ಧ ಸೆಕೆಂಡ್ ತಮ್ಮ ಜೀವದ ಬಗ್ಗೆ ಯೋಚಿಸಿದ್ದರೆ,ಸುತ್ತಮುತ್ತಲಿನ ಸಾವಿರಾರು ಮಂದಿ ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತಿತ್ತು.

ವಿಮಾನ ಟೇಕಾಫ್ ಆದ ನಂತರ ಪೈಲೆಟ್ಗಳು ಹೊರ ಬರಬಹುದಿತ್ತು ,ಹಾಗೆ ಬಂದಿದ್ದರೆ ವಿಮಾನ ಹೆಚ್ ಎ ಎಲ್ ಕಾಂಪೌಂಡ್ನಿಂದ ಆಚೆ,ಜನ ಸಂದಣಿ ಹೆಚ್ಚಿರುವ ಪ್ರದೇಶವಾದ ಮಾರತ್ತಹಳ್ಳಿ,ಕರಿಯಮ್ಮನ ಅಗ್ರಹಾರ,ಕಡೆ ಬಿದ್ದು ಸಾವಿರಾರು ಜನರ ಪ್ರಾಣಕ್ಕೆ ಕುತ್ತು ತರುತ್ತಿತ್ತು.

ವಿಮಾನ ರನ್ ವೇಯಲ್ಲಿ ಇರುವಾಗಲೇ ಟೈರ್ ನಡು ಗುತ್ತಾ ಕಳಚಿಕೊಂಡಿತು,ಅದರ ಹಿಂಬದಿ ಲೋಹ ರನ್ ವೇ ಗೆ ಉಜ್ಜಿದ ಕಾರಣ ಬೆಂಕಿ ಹೊತ್ತಿಕೊಂಡಿದೆ,ಕೆಲವೇ ಕ್ಷಣಗಳಲ್ಲಿ ಇಷ್ಟೆಲ್ಲಾ ನಡೆದುಹೋದಾಗ ಪೈಲೆಟ್ ಗಳು ‘ವೈಮಾನಿಕ ಸಂಚಾರ ನಿಯತ್ರಕರನ್ನ(ಎಟಿಸಿ)ಕೋಣೆಯಬಾರಿ ಸಂಪರ್ಕಿಸಿ ವಿಮಾನವನ್ನ ಟೇಕಾಫ್ ಮಾಡದಿರಲು ನಿರ್ಧರಿಸಿ ವಿಮಾನದಿಂದ ಏಜೆಕ್ಟ್ ಆಗುತ್ತಾರೆ,ಅವರನ್ನ ಕ್ಷೇಮವಾಗಿ ಇಳಿಸಬೇಕಿದ್ದ ಪ್ಯಾರಾಚುಟ್ಗಳು ಸುಟ್ಟುಹೋಗುತ್ತವೆ,ಒಬ್ಬ ಪೈಲೆಟ್ ಉರಿಯುತ್ತಿದ್ದ ಬೆಂಕಿಯ ಹತ್ತಿರ ಇಳಿದು ಜೀವಂತ ಸುಟ್ಟುಹೋದ ,ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಹುತಾತ್ಮರಾಗುತ್ತಾರೆ.

ಒಂದು ವೇಳೆ ಈ ವಿರಯೋಧರು ತಮ್ಮ ಜೀವನದ ಬಗ್ಗೆ ಯೋಚಿಸಿದ್ದರೆ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳಬೇಕಾಗಿ ಬರುತ್ತಿತ್ತು ,ಹೆಚ್ ಎ ಎಲ್ ಸುತ್ತಾಮುತ್ತ ಇರುವ ಟೇಕ್ ಪಾರ್ಕ್ ಉದ್ಯೋಗಿಗಳು ಬಾಚಾವ್ ಆಗಿದ್ದಾರೆ.

ಮಿರಾಜ್-2000 ವಿಮಾನವನ್ನ ಕಾರ್ಗಿಲ್ ಯುದ್ಧದಲ್ಲಿ ಬಳಸಲಾಗಿತ್ತು,ಅದಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು,ಕ್ಷಿಪನಿಗಳು,ಎಂಜಿನ್ಗಳನ್ನ ಅಳವಡಿಸಿ ಪ್ರಾಯೋಗಿಕ ಹಾರಾಟ ನಡೆಸಲಾಗುತ್ತಿತ್ತು.

ಸಾವಿರಾರು ಜನರ ಪ್ರಾಣ ಉಳಿಸಿ ಹುತಾತ್ಮರಾದ ಪೈಲಟ್ಗಳಾದ ನೇಗಿ ಹಾಗೂ ಅಬ್ರಾಲ್ ಅವರ ತ್ಯಾಗ ಅಮೂಲ್ಯವಾದದ್ದು.ದೇಶದ ಜನರು ಅವರ ತ್ಯಾಗವನ್ನ ಎಂದಿಗೂ ನೆನಪಿಟ್ಟುಕೊಳ್ಳಬೇಕು.ಜೈ ಹಿಂದ್

LEAVE A REPLY

Please enter your comment!
Please enter your name here