Home Entertainment ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ-2 ಸಿನಿಮಾ ನಿಂತೊಯ್ತಾ?ಕೆ ಜಿ ಎಫ಼್ – 2 ಸಿನಿಮಾ...

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ-2 ಸಿನಿಮಾ ನಿಂತೊಯ್ತಾ?ಕೆ ಜಿ ಎಫ಼್ – 2 ಸಿನಿಮಾ ಶುರು ಆಗತ್ತಾ?

236
0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ ಸಿನಿಮಾದ ನಂತರ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಅಂತಿದ್ದ ಗೊಂದಲಕ್ಕೆ ಫೈನಲಿ ತೆರೆಬಿದ್ದಿದೆ.ಕೆಜಿಎಫ್ ಸಿನಿಮಾ ರಿಲೀಸ್ ಗು ಮೊದಲೇ ಜಯಣ್ಣ ಹಾಗು ಎಂ.ಏನ್.ಕುಮಾರ್ ನಿರ್ಮಾಣದ ಮೈ ನೇಮ್ ಐಸ್ ಕಿರಾತಕ ಸಿನಿಮಾ ಸೆಟ್ಟೇರಿತ್ತು,ಆದರೆ ಕೆಜಿಎಫ್ ಸಿನೆಮಾಗೆ ಸಿಕ್ಕಿರೋ ಭರ್ಜರಿ ರೆಸ್ಪಾನ್ಸ್ ದಿಂದ ಕೆಜಿಎಫ್ ಸೀಕ್ವೆಲ್ ಶೂಟ್ ಆರಂಭಿಸೋದಕ್ಕೂ ಒತ್ತಡ ಹೆಚ್ಚಿತ್ತು.

ಈ ನಡುವೆ ಅನಿಲ್ ಕುಮಾರ್ ನಿರ್ದೇಶನದ ಮೈ ನೇಮ್ ಐಸ್ ಕಿರಾತಕ ಸಿನಿಮಾದ ಶೂಟಿಂಗ್ ಜನೇವರಿಯಿಂದ ಶುರುವಾಗುತ್ತೆ ಅಂತ ನಿರ್ಮಾಫಕರು ಹೇಳಿಕೊಂಡಿದ್ದರು,ಆದರೆ ಈಗ ಈ ಎಲ್ಲಾ ಕನ್ಫ್ಯೂಜನ್ಸ್ ಗೆ ತೆರೆಬಿದ್ದಿದೆ.ಈ ವರ್ಷ ಪೂರ್ತಿ ಕೆಜಿಎಫ್ ಸಿನಿಮಾದ ಸೀಕ್ವೆಲ್ ಚಿತ್ರೀಕರಣ ಶುರುವಾಗಲಿದ್ದು ಮುಂದಿನ ವರ್ಷ ತೆರೆಗೆಬರಲಿದೆಯಂತೆ.

ಇನ್ನು ಕೆಜಿಎಫ್ ಸೀಕ್ವೆಲ್ ಮುಂದಿನ ವರ್ಷ ತೆರೆಗೆ ಬರಲಿದ್ದು ಈ ಸಿನಿಮಾದ ಬಳಿಕ ಮೈ ನೇಮ್ ಐಸ್ ಕಿರಾತಕ ಸಿನಿಮಾ ಶೂಟಿಂಗ್ ಶುರುವಾಗಿ ತೆರೆ ಕಾಣಲಿದೆ.ಈಗಾಗಲೇ ಕಿರಾತಕ ಸೀಕ್ವೆಲ್ ಸಿನಿಮಾದ ನಿರ್ದೇಶಕ ಅನಿಲ್ ಕುಮಾರ್ ದಾರಿ ತಪ್ಪಿದ ಮಗ ಚಿತ್ರದ ಶೂಟಿಂಗ್ ಅನ್ನು ಆರಂಭಿಸಿದ್ದಾರೆ.ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ತಮ್ಮ ಹಿಟ್ ಸಿನಿಮಾ ಕೆಜಿಎಫ್ ನ ಸ್ಕ್ರಿಪ್ಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.

ಯಶ್ ಕೆಜಿಎಫ಼್

ಕಿರಾತಕ ಸೀಕ್ವೆಲ್ ಕಳೆದ ವರ್ಷವೇ ಸೆಟ್ಟೇರಿದರಿಂದ ಈ ವರ್ಷ ಅಂದ್ರೆ ೨೦೧೯ ರ ಡಿಸೆಂಬರ್ ನಲ್ಲಿ ರಿಲೀಸ್ ಆಗತ್ತೆ ಅಂತ ಹೇಳಲಾಗಿತ್ತು,ಈಗ ಫೈನಲಿ ಸಿನಿಮಾ ೨೦೨೦ ರಲ್ಲಿ ಶೂಟಿಂಗ್ ಶುರುಮಾಡಲಿದ್ದು ೨೦೨೧ ಕ್ಕೆ ತೆರೆಗೆಬರಲಿದೆ.

LEAVE A REPLY

Please enter your comment!
Please enter your name here