Home Entertainment ನಾಳೆನೇ ಕೆಜಿಎಫ್ ಬರ್ತಾ ಇದೆ, ಯಾವ ಚಾನೆಲ್ ಅಲ್ಲಿ ಗೊತ್ತೇ?

ನಾಳೆನೇ ಕೆಜಿಎಫ್ ಬರ್ತಾ ಇದೆ, ಯಾವ ಚಾನೆಲ್ ಅಲ್ಲಿ ಗೊತ್ತೇ?

1685
0

ಅಂತೂ ಇಂತು ಕೊನೆಗೂ ಕೆಜಿಎಫ್ ಚಿತ್ರ ನಿಮ್ಮ ಕೈಯಲ್ಲೇ ಬರುತ್ತಿದೆ, ಹೌದು ಕೆಜಿಎಫ್ ಬಗ್ಗೆ ಹೊಸ ದೊಡ್ಡ ಸುದ್ದಿ ಒಂದು ಹೊರಬಂದಿದೆ.

ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಚಿತ್ರ ಕೆಜಿಎಫ್ ಕಳೆದ ಡಿಸೆಂಬರ್ ಅಲ್ಲಿ ರಿಲೀಸ್ ಆಗಿ ನೂರಾರು ಕೋಟಿ ಬಾಚಿದ್ದು ನಿಮಗೆಲ್ಲಾ ಗೊತ್ತೇ ಇದೆ ಹಾಗೂ ಇನ್ನೂ ಕರ್ನಾಟಕದಲ್ಲಿ ಭರ್ಜರಿಯಾಗಿ ಓಡುತ್ತಾ ಐವತ್ತು ದಿನಗಳನ್ನು ಪೂರೈಸುತ್ತಿದೆ.

ಹೆಚ್ಚಿದ ಭಾರಿ ಬೇಡಿಕೆ ಇಂದ ಇನ್ನು ಕೆಲ ದಿನಗಳ ನಂತರ ಬರಬೇಕಿದ್ದ ಕೆಜಿಎಫ್ ಚಿತ್ರವನ್ನು ನಾಳೆಯೇ ಬಿಡುಗಡೆ ಹೊಂದಲಿದೆ.ಎಲ್ಲಿ ಅಂತಿರಾ ಮುಂದೆ ಒದಿ.

ಕೆಜಿಎಫ್ ಚಿತ್ರವನ್ನ ಮೆಚ್ಚದೆ ಇದ್ದವರೆ ಇಲ್ಲ, ಸ್ಯಾಂಡಲ್ವುಡ್ ಇಂದ ಹಿಡಿದು ಬಾಲಿವುಡ್ ವರೆಗೂ ಎಲ್ಲರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.ಕೆಜಿಎಫ್ ಚಿತ್ರ ಸದ್ಯ ತನ್ನ ಗೆಲುವಿನ ನಾಗಾಲೋಟವನ್ನ ಇನ್ನಷ್ಟು ಹೆಚ್ಚಿಸುಕೊಳ್ಳುತ್ತಾ ಮುನ್ನುಗ್ಗುತ್ತಿದೆ ಹಾಗೆಯೇ ಎಲ್ಲಾ ಬಾಕ್ಸ್ ಆಫೀಸ್ ನಲ್ಲಿ ತನ್ನದೇ ಆದ ದಾಖಲೆಗಳನ್ನು ಮಾಡುತ್ತಿದೆ.ಸದ್ಯ ಕೆಜಿಎಫ಼್ ಡಿಜಿಟಲ್ ಹಕ್ಕುಗಳ ಕಂಡುಕೇಳರಿಯದಷ್ಟುಮೊತ್ತಕ್ಕೆ ಮಾರಾಟವಾಗಿರುವುದು ಕನ್ನಡದ ಮತ್ತು ಕನ್ನಡಿಗರ ಶಕ್ತಿಯನ್ನು ಡಿಜಿಟಲ್‌ ಜಗತ್ತಿಗೆ ತೋರಿಸಿದಂತಾಗಿದೆ.

ಯಶ್ ಕೆಜಿಎಫ಼್

ಅಮೆಜಾನ್‌, ನೆಟ್‌ಫ್ಲಿಕ್ಸ್‌ಗಳು ಸಿನಿಮಾ ಖರೀದಿಸುವುದರಿಂದ ಸಿನಿಮಾ ನಿರ್ಮಿಸುವವರಿಗೆ ಹೆಚ್ಚಿನ ಬಲ ಸಿಕ್ಕಿದೆ. ಇದೀಗ ಹೆಚ್ಚು ಮೊತ್ತಕ್ಕೆ ಸಿನಿಮಾ ಮಾರಾಟವಾಗುತ್ತಿರುವುದು ಜಾಸ್ತಿ ಹಣ ಹೂಡಲು ಧೈರ್ಯ ತುಂಬಿದಂತಾಗಿದೆ. ಅಮೆಜಾನ್‌ ಪ್ರೈಮ್‌ ಸಂಸ್ಥೆ ‘ಕೆಜಿಎಫ್‌’ನ ಐದು ಭಾಷೆಯ ಚಿತ್ರಗಳನ್ನೂ ಖರೀದಿಸಿತ್ತು

ತೆಲುಗು ಜನರ ಸಿನಿಮಾ ಪ್ರೀತಿ:
ಅಮೆಜಾನ್ ಪ್ರೈಮ್ ಅವರು ಕೆಜಿಎಫ್ ಚಿತ್ರವನ್ನು ಇಷ್ಟು ಬೇಗ ಬಿಡುಗಡೆ ಮಾಡಲು ಕಾರಣ ಅಭಿಮಾನಿಗಳು, ಹೆಚ್ಚಾಗಿ ತೆಲುಗು ಜನರು ಅಂದರೆ ತಪ್ಪಾಗಲ್ಲ.ಕಳೆದ ಒಂದು ವಾರದಿಂದ ತೆಲುಗು ನಾಡಿನಲ್ಲಿ ಕೆಜಿಎಫ್ ಅಬ್ಬರ ಹೆಚ್ಚಾಗಿದ್ದು ದಿನ ದಿನ ಆಂದ್ರಪ್ರದೇಶದಲ್ಲಿ ಕೆಜಿಎಫ್ ಚಿತ್ರಕ್ಕೆ ಅಭಿಮಾನಿಗಳು ಹೆಚ್ಚುತ್ತಿದ್ದಾರೆ.

ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣವಾದ ಟ್ವಿಟರ್ ಅಲ್ಲಿ ಅಭಿಮಾನಿಗಳು ಕೆಜಿಎಫ್ ಬೇಕೆಂದು ಹಠ ಹಿಡಿದಿದ್ದು ನಿನ್ನೆ ಟ್ವಿಟರ್ ಅಲ್ಲಿ #ShameOnAmazonPrime ಎಂದು ಭಾರತದ ತುಂಬೆಲ್ಲಾ ಟ್ರೆಂಡ್ ಮಾಡಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಿ ಗೊತ್ತೇ:
ಕೆಜಿಎಫ್ ಚಿತ್ರದ ಆನ್ ಲೈನ್ ಹಕ್ಕನ್ನು ಅಮೆಜಾನ್ ಕಂಪನಿ ಖರೀದಿಸಿದ್ದು ಫೆಬ್ರವರಿ 5 ರಂದು ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಕೆಜಿಎಫ್ ಚಿತ್ರ ನೋಡೋದು ಹೇಗೆ:
ಅಮೆಜಾನ್ ಪ್ರೈಮ್ ವಿಡಿಯೋಗೆ ನೀವು ಸದಸ್ಯರಾಗಿದ್ದರೆ ಮಾತ್ರ ಚಿತ್ರವನ್ನು ನೋಡಬಹುದು, ಅಥವಾ ನಿಮ್ಮ ಗೆಳೆಯ/ಗೆಳತಿಯರ ಬಳಿ ಇದ್ದರೆ ಅದರ ಪಾಸ್ ವರ್ಡ್ ತೆಗೆದುಕೊಂಡು ಲಾಗಿನ್ ಆಗಿ ಚಿತ್ರವನ್ನು ನೋಡಬಹುದು.

ಸದ್ಯಕ್ಕೆ ಅಮೆಜಾನ್ ಪ್ರೈಮ್ ಅಲ್ಲಿ ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಅವತರಣಿಕೆ ಮಾತ್ರ ಬಿಡುಗಡೆ ಆಗುತ್ತಿದ್ದು ಹಿಂದಿ ಅವತರಣಿಕೆಯು ಸೋನಿ ಮ್ಯಾಕ್ಸ್‌‌ ಅಲ್ಲಿ ಸದ್ಯದಲ್ಲೇ ಬರಲಿದೆ.

LEAVE A REPLY

Please enter your comment!
Please enter your name here