Home Featured-Articals ಮಾಜಿ ಯೋಧನ ಕಷ್ಟಕ್ಕೆ ಸ್ಪಂದಿಸಿ ಮಾನವಿಯತೆ ಮೆರೆದ ಗಂಭಿರ್

ಮಾಜಿ ಯೋಧನ ಕಷ್ಟಕ್ಕೆ ಸ್ಪಂದಿಸಿ ಮಾನವಿಯತೆ ಮೆರೆದ ಗಂಭಿರ್

181
0

ಗೌತಮ್ ಗಂಭಿರ್ ಭಾರತದ ಹೆಸರಾಂತ ಕ್ರಿಕೆಟಿಗ,ಗಂಭೀರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಆಟದ ಮೈದಾನದಲ್ಲಿ ಥೇಟ್ ಯುದ್ಧ ಭೂಮಿಯಲ್ಲಿ ಹೋರಾಡುವಂತೆ ಆಡುವ ಗಂಭೀರ್ ಮಾಹಾನ್ ದೇಶ ಪ್ರೇಮಿ.

ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ದೇಶ ಪ್ರೇಮ ತೋರಿಸುವ ಈ ಕಾಲದಲ್ಲಿ ಗಂಭೀರ್ ಅವರದ್ದು ವಿಶಿಷ್ಟ ವ್ಯಕ್ತಿತ್ವ, ಗಂಭೀರ್ ಅನೇಕ ಬಾರಿ ಸೇನೆಯ ನಿವೃತ್ತ ಯೋಧರಿಗೆ ಸಹಾಯವನ್ನೂ ಮಾಡಿದ್ದಾರೆ.ಗಂಭೀರ್ ತಾವು ದುಡಿದ ಹಣದಿಂದ ಹಲವಾರು ಸೈನಿಕರಿಗೆ ನೆರವಾಗಿದ್ದಾರೆ,ಮೊದಲಿನಿಂದಲೂ ಗಂಭೀರ್ ಬಡವರು ಹಾಗೂ ನಿವೃತ್ತ ಸೈನಿಕರಿಗೆ ಸಹಾಯ ಮಾಡುತ್ತಲೇ ಬರುತ್ತಿದ್ದಾರೆ.

ಸದಾ ದೇಶಭಕ್ತರಾಗಿ, ದೇಶವನ್ನು ಕಾಯುವ ಸೈನಿಕರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಇವರ ಕಣ್ಣಿಗೆ ಭಿಕ್ಷೆ ಬೇಡುತ್ತಿದ್ದ ಪಿತಾಂಬರ  ರವರು ಕಾಣಸಿಗುತ್ತಾರೆ. ಹಣ ನೀಡಿ ಇವರ ಸಹಾಯಕ್ಕೆ ಧಾವಿಸುವುದು ಗೌತಮ್ ಗಂಭಿರ್ ರವರಿಗೆ ಎರಡು ನಿಮಿಷಗಳ ಕೆಲಸವಾಗಿತ್ತು. ಆದರೆ ತಾವು ನೀಡಿದ ಹಣ ಎಷ್ಟು ದಿವಸ ಇವರನ್ನು ಪೋಷಿಸುತ್ತದೆ ಎಂಬುದನ್ನು ಯೋಚಿಸಿದ ಗಂಭೀರ್ ರವರು ತಾವು ನೋಡಿದ ತಕ್ಷಣವೇ ವರ ಹಿನ್ನೆಲೆ ಹಾಗೂ ಸಮಸ್ಯೆ ಏನೆಂಬುದನ್ನು ವಿವರವಾಗಿ ಕೇಳಿ ತಿಳಿದುಕೊಳ್ಳುತ್ತಾರೆ.

ತಕ್ಷಣ ಭಿಕ್ಷೆ ಬೇಡುತ್ತಿದ್ದ ಯೋಧರ ಹಿನ್ನಲೆಯನ್ನ ತಳಿದುಕೊಳ್ಳುತ್ತಾರೆ,ಅವರು ಭಾರತೀಯ ಸೇನಾ ಪಡೆಯ ಹೇಮ್ಮೆಯ ಯೋಧ ಯೋಧ 1965 ಹಾಗೂ 1971 ರಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಭಾರತದ ಗೆಲುವಿನಲ್ಲಿ ಪಾತ್ರ ವಹಿಸಿದ್ದರು. ಆದರೆ ದುರದೃಷ್ಟವಶಾತ್ ಕೆಲವು ತಾಂತ್ರಿಕ ಕಾರಣಗಳಿಂದ ಯೋಧರಿಗೆ ನಿವೃತ್ತಿಯ ನಂತರ ಸಿಗಬೇಕಾದ ಯಾವುದೇ ನಿವೃತ್ತಿ ಸವಲತ್ತುಗಳು ಸಿಗದೇ ಹೋಯಿತು.

ಅದೃಷ್ಟವಶಾತ್ ಗಂಭೀರ್ ಅಂದು ಆ ರಸ್ತೆಯಲ್ಲಿ ಚಲಿಸಿದ್ದಾರೆ,ಯಾರೋ ಒಂದು ಬೋರ್ಡ್ ತೂಗು ಹಾಕಿಕೊಂಡು ಭಿಕ್ಷೆ ಬೇಡುತ್ತಿರುವುದನ್ನ ಗಮನಿಸಿದ ಗಂಭೀರ್ ಅವರು ಮಾಜಿ ಯೋಧರು ಎಂದು ತಿಳಿದು ಬರುತ್ತದೆ.

ತಕ್ಷಣ ಭಿಕ್ಷೆ ಬೇಡುತ್ತಿದ್ದ ಯೋಧನ ಭಾವ ಚಿತ್ರವನ್ನು ಸೆರೆಹಿಡಿದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಕ್ಷಣಾ ಸಚಿವಾಲಯಕ್ಕೆ ವಿಷಯವನ್ನು ಮುಟ್ಟಿಸುತ್ತಾರೆ.ಟ್ವಿಟರ್ ನಲ್ಲಿ ಸಾಮಾನ್ಯವಾಗಿ ತಕ್ಷಣವೇ ಎಲ್ಲಾ ಕಾರ್ಯಗಳಿಗೂ ಸ್ಪಂದಿಸುವ ರಕ್ಷಣಾ ಸಚಿವಾಲಯ, ಗೌತಮ್ ಗಂಭೀರ್ ರವರ ಒಂದೇ ಒಂದು ಪ್ರೀತಿಯಿಂದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ ಮಾಜಿ ಯೋಧರ ನಂಬರ್ ಅವರಿಗೆ ಸಿಗಬೇಕಾದ ಎಲ್ಲಾ ನಿವೃತ್ತಿ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ. ಗಂಭೀರ್ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here