Home Entertainment ಕನ್ನಡದ ಖ್ಯಾತ ನಟಿಯ ಹೆಸರಲ್ಲಿ ಒಂದು ಕಾನೂನಿದೆ ಆ ಕಾನೂನಿಗೆ ಆಕೆಯ ಹೆಸರು ಇಟ್ಟಿದ್ದಾರೆ.

ಕನ್ನಡದ ಖ್ಯಾತ ನಟಿಯ ಹೆಸರಲ್ಲಿ ಒಂದು ಕಾನೂನಿದೆ ಆ ಕಾನೂನಿಗೆ ಆಕೆಯ ಹೆಸರು ಇಟ್ಟಿದ್ದಾರೆ.

14579
0

ಹುಡುಗಿ ಕಪ್ಪು, ಈಕೆ ಸಿನಿಮಾ ಮಾಡಲು ಲಾಯಕ್ಕಿಲ್ಲ ಎಂದು ಎಷ್ಟೋ ಜನ ಅವಮಾನ ಮಾಡಿದರು, ಇದೆಲ್ಲ ಕಷ್ಟಗಳ ನಡುವೆಯೂ ಪಟ್ಟುಬಿಡದೆ ಟಾಪ್ ನಟಿಯಾಗಿ ಬೆಳೆದ ನಟಿ ಅಂದರೆ ಸರಿತಾ, ಆದರೆ ನಟಿ ಸರಿತಾ ಅವರ ಬಾಲ್ಯ ಜೀವನ ತುಂಬಾ ದಾರುಣವಾಗಿತ್ತು.

ಸರಿತಾ 15 ವರ್ಷ ವಯಸ್ಸಿದಾಗಲೇ ನಟ ವೆಂಕಟಸುಬ್ಬಯ್ಯ ಅವರಿಗೆ ಕೊಟ್ಟು ಆಕೆಯನ್ನ ಮದುವೆ ಮಾಡಲಾಯಿತು, ಇಬ್ಬರೂ ಮದ್ರಾಸ್ ನಲ್ಲಿ ಕೆಲವು ತಿಂಗಳು ಸಂಸಾರ ಮಾಡಿದರು.

ಸಂಸಾರ ಏನು ಅಂತ ಗೊತ್ತಿಲ್ಲದ ವಯಸ್ಸಿನಲ್ಲಿ ಸರಿತಾ ಮದುವೆಯಾಗಿದ್ದರು, ನಂತರ ಇಬ್ಬರಿಗೂ ಹೊಂದಾಣಿಕೆಯಾಗಲಿಲ್ಲ ಆಗ ಗಂಡನ ಜೊತೆ ಇರದೇ ತನ್ನ ಪೋಷಕರ ಜೊತೇನೆ ಜೀವನವನ್ನ ಸಾಗಿಸಿದರು ಸರಿತಾ. ಹೈ ಸ್ಕೂಲ್ ನಲ್ಲಿ ಓದುತ್ತಿದ್ದ ಸರಿತಾ ಅವರನ್ನ ನೋಡಿದ ರಸ್ತೆಯಲ್ಲಿ ನೋಡಿದ ಒಬ್ಬ ಬರಹಗಾರ ಕಮಲ್ ಹಾಸನ್ ಅವರ ಚಿತ್ರದಲ್ಲಿ ನಟನೆ ಮಾಡುತ್ತೀಯಾ ಎಂದು ಕೇಳಿದರು.

ನಟನೆಯ ಮೇಲೆ ಹುಚ್ಚು ಇಟ್ಟುಕೊಂಡಿದ್ದ ಸರಿತಾ ಕಮಲ್ ಹಾಸನ್ ಜೊತೆ ನಟನೆ ಮಾಡಲು ಒಪ್ಪಿದರು, ನಂತರ ತನ್ನ ಅದ್ಬುತ ಪ್ರತಿಭೆಯ ಮೂಲಕ ದೊಡ್ಡ ನಟಿಯಾಗಿ ಬೆಳೆದರು ನಟಿ ಸರಿತಾ.

ಇನ್ನು ಈ ಸಮಯದಲ್ಲಿ ಸರಿತಾ ಅವರ ಮೊದಲ ಮದುವೆಯ ವಿಚ್ಛೇದನದ ಕೇಸ್ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿತು, ಕಮಲ್ ಹಾಸನ್ ಜೊತೆ ‘ಮಾರೋ ಚರಿತ್ರ’ ಚಿತ್ರದಲ್ಲಿ ನಟನೆ ಮಾಡಿದ ನಂತರ ಬೆಳಗಾಗುವುದರಲ್ಲಿ ದೊಡ್ಡ ಸ್ಟಾರ್ ಆಗಿಬಿಟ್ಟರು ನಟಿ ಸರಿತಾ.

ಈ ಸಮಯದಲ್ಲಿ ತನ್ನ ಹೆಂಡತಿಯನ್ನ ನನ್ನ ಜೊತೆ ಕಳುಹಿಸಿ ಎಂದು ಗಂಡ ವೆಂಕಟಸುಬ್ಬಯ್ಯ ಕೋರ್ಟ್ ನಲ್ಲಿ ಕೇಸ್ ಹಾಕಿದರು, ಆದರೆ ಆತನ ಜೊತೆ ಸಂಸಾರ ಮಾಡಲು ಸರಿತಾ ಅವರು ಒಪ್ಪಲಿಲ್ಲ.

ಈ ಕೇಸ್ ಹೈ ಕೋರ್ಟ್ ಮೆಟ್ಟಿಲ್ಲನ್ನ ಏರಿತು, ಆದರೂ ಸರಿತಾ ಅವರು ಒಪ್ಪಿಕೊಳ್ಳಲಿಲ್ಲ ಮತ್ತು ಅದು ಮದುವೆನೇ ಅಲ್ಲ ವಾದ ಮಾಡಿದರು, ಆಗ ಜೆಸ್ಟಿಸ್ ಚೌದರಿ ಕೊಟ್ಟ ತೀರ್ಪು ದೊಡ್ಡ ಸಂಚಲವನ್ನ ಸೃಷ್ಟಿ ಮಾಡಿತು.

ಇನ್ನು ಗೌರವಕ್ಕೆ ವಿರುದ್ಧವಾಗಿರುವ ವಿವಾಹ ಕಾನೂನಿನ ಸೆಕ್ಷನ್ 9 ನ್ನ ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಕೇಸ್ ಹೊಡೆದುಹಾಕಿದರು. ಆಕೆಯ ಅನುಮತಿ ಇಲ್ಲದೆ ಆಕೆಯ ದೇಹದ ಯಾವುದೇ ಭಾಗವನ್ನ ಮುಟ್ಟಿದರು ಅದು ತಪ್ಪು, ಸರಿತಾ ಪರವಾಗಿ ನಿಂತ ಕೋರ್ಟ್ ಆಕೆಗೆ ವಿಚ್ಛೇದನದನ್ನ ಕೊಟ್ಟಿತು, ಆವತ್ತು ಜೆಸ್ಟಿಸ್ ಸೋದರಿ ಕೊಟ್ಟ ತೀರ್ಪು ಈಗ ಸರಿತಾ ಕಾನೂನು ಎಂದು ಪ್ರತಿದಿನ ಕರ್ಟ್ ನಲ್ಲಿ ಕೇಳಿಸುತ್ತಿರುತ್ತದೆ.

ಕಾನೂನು ಮಹಿಳೆಯರಿಗೆ ಶ್ರೀರಕ್ಷೆಯಾಗಿ ನಿಂತಿದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

LEAVE A REPLY

Please enter your comment!
Please enter your name here