Home Featured-Articals ಗೂಗಲ್ ನಲ್ಲಿ ‘ಬೆಸ್ಟ್ ಸಿಎಂ ಆಫ್ ಕರ್ನಾಟಕ’ ಎಂದು ಹುಡುಕಿದರೆ ಯಾರ ಹೆಸರು ಬರತ್ತೇ ಗೊತ್ತಾ!ಇಲ್ಲಿ...

ಗೂಗಲ್ ನಲ್ಲಿ ‘ಬೆಸ್ಟ್ ಸಿಎಂ ಆಫ್ ಕರ್ನಾಟಕ’ ಎಂದು ಹುಡುಕಿದರೆ ಯಾರ ಹೆಸರು ಬರತ್ತೇ ಗೊತ್ತಾ!ಇಲ್ಲಿ ನೋಡಿ.

1945
0

ಗೂಗಲ್ ಪ್ರತಿಯೊಬ್ಬ ಮೊಬೈಲ್ ಫೋನ್ ಬಳಕೆದಾರನ ಅವಿಭಾಜ್ಯ ಅಂಗ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾವು ಏನೇ ಹುಡುಕಬೇಕಿದ್ದರು,ಗೂಗಲ್ ಹುಡುಕಾಟದ ಮೊರೆ ಹೋಗುತ್ತೇವೆ. ನಮ್ಮ ನಂಬಿಕೆ ಹುಸಿ ಮಾಡದಂತೆ ಗೂಗಲ್ ಹುಡುಕಾಟ ಕೂಡ ನಮ್ಮ ಪ್ರಶ್ನೆಗಳಿಗೆ/ ಸಂದೇಹಗಳಿಗೆ ನಿಖರ ಉತ್ತರಗಳನ್ನು ನೀಡುತ್ತದೆ.ಗೂಗಲ್ ಹುಡುಕಾಟದಲ್ಲಿ ಕರ್ನಾಟಕದ ಅತ್ಯತ್ತಮ ಮುಖ್ಯಮಂತ್ರಿ ಯಾರು ಎಂದು ಹುಡುಕಿದರೆ,ಯಾರ ಹೆಸರು/ಭಾವಚಿತ್ರ ಬರುತ್ತದೆ ಗೊತ್ತ? ಮುಂದೆ ಓದಿ…

ಗೂಗಲ್ ನಲ್ಲಿ ‘ಬೆಸ್ಟ್ ಸಿಎಂ ಆಫ್ ಕರ್ನಾಟಕ’ ಎಂದು ಹುಡುಕಿದರೆ, ನಮ್ಮ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರು ಮತ್ತು ಭಾವಚಿತ್ರ ಬರುತ್ತದೆ.2,305 ಮತಗಳನ್ನು  ಪಡೆದು ಮೊದಲ ಸ್ಥಾನದಲ್ಲಿ  ಇದ್ದಾರೆ.ಕೆಂಗಲ್ ಹನುಮಂತಯ್ಯ 952 ಮತ ಪಡೆದು ಎರಡನೇ ಸ್ಥಾನದಲ್ಲಿ ಇದ್ದಾರೆ.

ಎಸ್.ಬಂಗಾರಪ್ಪ,ಕನ್ನಡ ಕಂಡ ಧೀಮಂತ ನಾಯಕ ಅಂದರೆ ತಪ್ಪಾಗಲಾರದು,ಸಾರೆಕೋಪ್ಪ ಬಂಗಾರಪ್ಪನವರು ರಾಜ್ಯದ 12ನೇ ಮುಖ್ಯಮಂತ್ರಿಯಾಗಿದ್ದರು.1119 ಮತವನ್ನ ಪಡೆದು 3ನೆ ಸ್ಥಾನವನ್ನ ಪಡೆದಿದ್ದಾರೆ.

ಹೆಚ್ ಡಿ ದೇವೆಗೌಡ(ಜನನ 18 ಮೇ 1933) 14 ನೇ ಕರ್ನಾಟಕ ಮುಖ್ಯಮಂತ್ರಿ (11 ಡಿಸೆಂಬರ್ 1994 – 31 ಮೇ 1996)ಇತರ ಸ್ಥಾನಗಳು:11ನೇ ಭಾರತದ ಪ್ರಧಾನಮಂತ್ರಿ(1 ಜೂನ್ 1996-21 ಏಪ್ರಿಲ್-1997).1,561 ಮತವನ್ನ ಪಡೆದು 4ನೆ ಸ್ಥಾನವನ್ನ ಪಡೆದಿದ್ದಾರೆ.

ಡಿ. ದೇವರಾಜ್ ಅರಸ್, ಕರ್ನಾಟಕ ದ 8 ನೇ ಮುಖ್ಯಮಂತ್ರಿ (1972-1977) (1977-1980) 920 ಮತವನ್ನ ಪಡೆದು 5ನೆ ಸ್ಥಾನವನ್ನ ಪಡೆದಿದ್ದಾರೆ.

ರಾಮಕೃಷ್ಣ ಹೆಗ್ಡೆ,ಕರ್ನಾಟಕದ ಹತ್ತನೇ ಮುಖ್ಯಮಂತ್ರಿಯಾಗಿ 1983 ಮತ್ತು 1988 ರ ನಡುವೆ ಮೂರು ಅವಧಿಗಳಿಗೆ ಸೇವೆ ಸಲ್ಲಿಸಿದ್ದರು. 914 ಮತವನ್ನ ಪಡೆದು 6ನೆ ಸ್ಥಾನವನ್ನ ಪಡೆದಿದ್ದಾರೆ.

ಎಸ್.ಎಮ್ ಕೃಷ್ಣ,2009 ರಿಂದ ಅಕ್ಟೋಬರ್ 2012 ರವರೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ ಭಾರತೀಯ ರಾಜಕಾರಣಿಯಾಗಿದ್ದಾರೆ.ರಾಜ್ಯಸಭೆಯಲ್ಲಿ ಭಾರತೀಯ ಸಂಸತ್ ಸದಸ್ಯರಾಗಿದ್ದ ಕೃಷ್ಣ 1999 ರಿಂದ 2004 ರವರೆಗೆ ಕರ್ನಾಟಕದ 16 ನೇ ಮುಖ್ಯಮಂತ್ರಿ ಮತ್ತು 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19 ನೇ ಗವರ್ನರ್ ಅಗಿ ಸೇವೆ ಸಲ್ಲಿಸಿದ್ದಾರೆ.720 ಮತವನ್ನ ಪಡೆದು 7ನೆ ಸ್ಥಾನವನ್ನ ಪಡೆದಿದ್ದಾರೆ.

ಎಸ್ ನಿಜಲಿಂಗಪ್ಪ ,1956 ಮತ್ತು 1968 ರ ನಡುವೆ ಹಿರಿಯ ಕಾಂಗ್ರೆಸ್ ರಾಜಕಾರಣಿ ಮತ್ತು ಕರ್ನಾಟಕದ 1962 ಮತ್ತು 1968 ರ ನಡುವೆ ಇವರು ಮುಖ್ಯಮಂತ್ರಿ. ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. 440 ಮತವನ್ನ ಪಡೆದು 8ನೆ
ಸ್ಥಾನವನ್ನ ಪಡೆದಿದ್ದಾರೆ.

ಕಡಿದಾಲ್ ಮಂಜಪ್ಪ 1956 ರಲ್ಲಿ ಸ್ವಲ್ಪ ಸಮಯದವರೆಗೆ ಕರ್ನಾಟಕದ ಮೂರನೇ ಮುಖ್ಯಮಂತ್ರಿಯಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕಡಿದಾಲ್ ಗ್ರಾಮದವರಾಗಿದ್ದರು.340 ಮತವನ್ನ ಪಡೆದು 9ನೆ ಸ್ಥಾನವನ್ನ ಪಡೆದಿದ್ದಾರೆ.

ಕೆ ಸಿ ರೆಡ್ಡಿ ,ಕಸಂಬಲ್ಲಿ ಚೆಂಗರಾರಾಯ ರೆಡ್ಡಿ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದರು (ಅಗಿನ ಮೈಸೂರು ರಾಜ್ಯ).221 ಮತವನ್ನ ಪಡೆದು 10ನೆ ಸ್ಥಾನವನ್ನ ಪಡೆದಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ 14ನೆ ಸ್ಥಾನ ಮತ್ತು ಡಿ.ವಿ ಸದಾನಂದ ಗೌಡರಿಗೆ 19, ಬಿ. ಎಸ್. ಯಡಿಯೂರಪ್ಪ 21ನೆ ಸ್ಥಾನವನ್ನ ಪಡೆದಿದ್ದಾರೆ.22ನೆಯವರಾಗಿ ಜಗದೀಶ್ ಶೆಟ್ಟರ್ ಕೊನೆಯ ಸ್ಥಾನವನ್ನ ಪಡೆದಿದ್ದಾರೆ. ನಿವೂ ವೋಟ್ ಮಾಡಲು ಲಿಂಕ್ ಅನ್ನ ಕ್ಲಿಕ್ ಮಾಡಿ.ಬೆಸ್ಟ್ ಸಿಎಂ ಆಫ್ ಕರ್ನಾಟಕ

LEAVE A REPLY

Please enter your comment!
Please enter your name here