Home Featured-Articals ದಿವಾಳಿ ಎದ್ದ ಪಾಕ್ ನಿಂದ ಕತ್ತೆಗಳ ರಫ್ತು,ಖರೀದಿಸುವ ದೇಶ ಯಾವುದು ಗೋತ್ತಾ?

ದಿವಾಳಿ ಎದ್ದ ಪಾಕ್ ನಿಂದ ಕತ್ತೆಗಳ ರಫ್ತು,ಖರೀದಿಸುವ ದೇಶ ಯಾವುದು ಗೋತ್ತಾ?

603
0

ಇಂತಾದೊಂದು ಸುದ್ದಿ ನಿವೂ ಎಂದು ಕೆಳಿರುವುದಕ್ಕೆ ಸಾದ್ಯವೇ ಇಲ್ಲಾ,ಅಂತಹ ವಿಚಿತ್ರವಾದ ಸುದ್ದಿಗೆ ಸದ್ಯ ಪಾಪಿ ಪಾಕಿಸ್ತಾನ ಗ್ರಾಸವಾಗಿದೆ, ಇಂತದ್ದೊಂದು ಸುದ್ದಿ ಓದಿ ನೀವು ನಕ್ಕರೆ, ನಮಗೂ ನಿಮ್ಮ ನಗುವಿನಲ್ಲಿ ಪಾಲಿರಲಿ. ಇದು ಒಂದು ಸಾರ್ವಭೌಮ ರಾಷ್ಟ್ರಕ್ಕೆ ಮಾಡುತ್ತಿರುವ ಅಪಮಾನವಲ್ಲ, ಬದಲಿಗೆ ತನ್ನ ಸಾರ್ವಭೌಮತೆಯನ್ನು ತನ್ನ ತಪ್ಪುಗಳಿಂದಲೇ ಕಳೆದುಕೊಳ್ಳುತ್ತಿರುವ ಪಾಕಿಸ್ತಾನದ ಮೇಲಿನ ಅಸಮಾಧಾನ .

ಪಾಕಿಸ್ತಾನ ಸದ್ಯ ತನ್ನದೆ ತಪ್ಪಿಗೆ ಇಂದು ಅರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದೆ, ಅರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಇಂದು “ಕತ್ತೆ”ಗಳನ್ನ ರಫ಼್ತು ಮಾಡಲು ಹೊರಟಿದೆ. ದಿವಾಳಿಯಾಗಿರುವ ಪಾಕ್,ರಫ್ತಿಗೆ ತನ್ನ ಕತ್ತೆಗಳನ್ನು ನೆಚ್ಚಿಕೊಂಡಿದ್ದು ಅದರ ದುಸ್ತಿತಿಯನ್ನ ತೊರಿಸುತ್ತದೆ.

ಪಾಕಿಸ್ತಾನ,ಇದು ಮೂರನೇ ಅತಿ ದೊಡ್ಡ ಕತ್ತೆಯ ಸಂಖ್ಯೆಯನ್ನು ಹೊಂದಿದೆ.  ರಫ್ತಿಗೆ ತನ್ನ ಕತ್ತೆಗಳನ್ನು ನೆಚ್ಚಿಕೊಂಡಿದ್ದು, ನೆರೆಯ ಚೀನಾ ಈ ಕತ್ತೆಗಳನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ.

ಪಾಕಿಸ್ತಾನದಲ್ಲಿ ಎರಡು ಕತ್ತೆ ಫಾರ್ಮ್‌ಗಳನ್ನು ವಿದೇಶಿ ಸಹಭಾಗಿತ್ವದಲ್ಲಿ ಡೆರಾ ಇಸ್ಮಾಯಿಲ್ ಖಾನ್ ಮತ್ತು ಮನ್ಷೇರಾದಲ್ಲಿ ಆರಂಭಿಸಲು ಚೀನಾ ಹಣ ಹೂಡಿಕೆ ಮಾಡಲಿದೆ. ಅಲ್ಲಿ ಕತ್ತೆಗಳನ್ನು ಸಾಕಿ ಬೆಳೆಸಿ ಬಳಿಕ ಚೀನಾಕ್ಕೆ ರಫ್ತು ಮಾಡಲಾಗುತ್ತದೆ.ಮೊದಲ ಮೂರು ವರ್ಷಗಳಲ್ಲಿ 80,000 ಕತ್ತೆಗಳನ್ನು ರಫ್ತು ಮಾಡಲು ಸರ್ಕಾರ ಯೋಜಿಸಿದೆ .

ಚೀನಾ ಸರ್ಕಾರ ಮತ್ತು ಅಲ್ಲಿನ ನೋಂದಾಯಿತ ಕಂಪನಿಗಳೊಂದಿಗೆ ಪಾಕ್ ಒಪ್ಪಂದ ಮಾಡಿಕೊಂಡಿದ್ದು, ಒಟ್ಟು 3 ಬಿಲಿಯನ್ ಹೂಡಿಕೆ ಮಾಡಲು ಚೀನಾ ಸಮ್ಮತಿಸಿದೆ.

LEAVE A REPLY

Please enter your comment!
Please enter your name here