Home Entertainment ಭಾರತದ ಜನಪ್ರಿಯ ಹಿಂದಿ ಟಿವಿ ಶೋಗೆ ಎಂಟ್ರಿ ಕೋಟ್ಟ ಕಿಚ್ಚ ಸುದೀಪ

ಭಾರತದ ಜನಪ್ರಿಯ ಹಿಂದಿ ಟಿವಿ ಶೋಗೆ ಎಂಟ್ರಿ ಕೋಟ್ಟ ಕಿಚ್ಚ ಸುದೀಪ

853
0

ದಿ ಕಪೀಲ್ ಶರ್ಮಾ ಶೋ,ಇದು ಭಾರತ ಕಂಡ ಅತ್ಯಂತ ಜನಪ್ರಿಯ ಟಿವಿ ಕಾರ್ಯಕ್ರಮಗಳಲೊಂದು ಎಂದರೆ ತಪ್ಪಾಗಲಾರದು, ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ ಸದ್ಯ ಮತ್ತೆ ಶುರುವಾಗಿ ಸದ್ದು ಮಾಡುತ್ತಿದೆ,ಸಾಮಾನ್ಯ ಹಾಸ್ಯ ಕಲಾವಿದ ತನ್ನ ಅವಿರತ ಪರಿಶ್ರಮದಿಂದ ಹೆಗೆ ಜನಮನ ಗೆಲ್ಲಬಹುದು ಎಂಬುದಕ್ಕೆ ಈ ಕಾರ್ಯಕ್ರಮವೆ ಸಾಕ್ಷಿ, ಹಾಸ್ಯಗಳಲ್ಲಿ ಮುಂಚಿನ ಮೋನಚು ಇರದಿದ್ದರು ಇಂದಿಗೂ ಭಾರತದ ನಂ- 1 ಕಾರ್ಯಕ್ರಮ.

ಇಂತಹ ಕಾರ್ಯಕ್ರಮಕ್ಕೆ ನಮ್ಮ ಚಂದನವನದ ಸುಪರ್ ಸ್ಟಾರ್ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ,ಕನ್ನಡವಲ್ಲೆದೆ ರಾಷ್ಟ್ರ ಮಟ್ಟದಲ್ಲಿ ಗುರುತಿಕೊಂಡಿರುವ ಕೇಲವೆ ಕೆಲವು ಈ ಪೀಳಿಗೆಯ ನಟರಲ್ಲಿ ಸುದೀಪ್ ಮೊದಲಿಗರು ಎಂದರೆ ತಪ್ಪಾಗಲಾರದು,ಕಿಚ್ಚ ಸುದೀಪ್ ರಾಮ್ ಗೋಪಾಲ್ ವರ್ಮಾ ಅವ್ರ ಫುಂಕ್ ಚಿತ್ರದಿಂದ ಹಿಂದಿ ಚಿತ್ರರಂಗವನ್ನ ಪ್ರವೆಶಿಸಿ,ಸುಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವ್ರ ಜೊತಗು ನಟಿಸಿ ಸೈ ಅನಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಲ ಕನ್ನಡದ ತಾರೆ ಅನಿಸಿಕೊಂಡಿದ್ದಾರೆ,ಸುದೀಪ್ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದು ಅದು ಮುಂದಿನವಾರ ಪ್ರಸಾರವಾಗುವ ಸಾಧ್ಯತೆಯಿದೆ,ಇನ್ನು ಸುದೀಪ್ ಜೋತೆ ಬಾಲಿವುಡ್ ನಟ ಸುನೀಲ್ ಶೆಟ್ಟಿ,ಬಂಗಾಳಿ ನಟ ಮನೋಜ್ ತಿವಾರಿ,ಸೆರಿದಂತೆ ಅನೆಕರು ಭಾಗವಹಿಸಿದ್ದಾರೆ.

ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್ ‘ಹೆಚ್ಚಾಗಿ ನಗುವವರೊಡನೆ ನಾನು ನಗು ಅವಕಾಶ ಸಿಕ್ಕಿದ್ದು ತುಂಬ ಸಂತೋಷವಾಗಿದೆ ಯಾರೆಲ್ಲ ನನ್ನ ಜೊತೆ ಇದ್ರಿ ಅವರೆಲ್ಲರಿಗೂ ನನ್ನ ಅಭಿನಂಧನೆಗಳು’ ಎಂದು ತಮ್ಮ ಟ್ವಿಟರ್ ಖಾತೆ ಯ್ಲಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಟೀಸರ್ ಅನ್ನ ಅನೆಕ ಬಾಲಿವುಡ್ ಮಂದಿ ಹೊಗಳಿದ್ದಾರೆ ಅದರಲ್ಲೂ ಬಾಲಿವುಡ್ ಬಾಯ್ ಸಲ್ಮಾನ್ ಖಾನ್ ಕೂಡ ಟ್ವಿಟ್ ಮಾಡಿದ್ದು ವಿಶೆಷವಾಗಿತ್ತು. ಕನ್ನಡ,ತೆಲಗು ಸೆರಿದಂತೆ ಅನೆಕ ಸಿನಿಮಾಗಳು ರೀಲಿಸ್ ಅಗಲಿವೆ.

https://www.youtube.com/watch?v=POMumo3pS80

LEAVE A REPLY

Please enter your comment!
Please enter your name here