Home Health & Fitness ಅಸಿಡಿಟಿ ಆದಾಗ ಮಾತ್ರೆ ನುಂಗೋ ಮುಂಚೆ ಈ‌ ಮನೆಮದ್ದುಗಳನ್ನು ಟ್ರೈ ಮಾಡಿ

ಅಸಿಡಿಟಿ ಆದಾಗ ಮಾತ್ರೆ ನುಂಗೋ ಮುಂಚೆ ಈ‌ ಮನೆಮದ್ದುಗಳನ್ನು ಟ್ರೈ ಮಾಡಿ

180
0

ಎಲ್ಲಾರ್ ಜೀವನದಲ್ಲೂ ಒಂದಲ್ಲ ಒಂದ್ ಸಲ ಆಸಿಡಿಟಿ ಆಗೇ ಆಗತ್ತೆ. ಯಾವುದೋ ಫಂಕ್ಷನ್ ಅಲ್ಲಿ ಒಂದು ಗುಲಾಬ್ ಜಾಮೂನ್ ಹೆಚ್ಚಾಗಿ ತಿಂದ್ರೆ ಅಥವಾ ಕಾಫೀ ಜೊತೆ ಖಾರಖಾರವಾಗಿ ಸಮೋಸ ಬಾರಿಸಿದ್ರೆ ಹುಳೀತೇಗು ಹೊಟ್ಟೆಶೂಲೆ ಶುರು ಆಗತ್ತೆ. ಇಂತಾ ಟೈಮಲ್ಲಿ ಒಂದು ಬಾಟಲ್ ಆಂಟಾಸಿಡ್ – ಜೆಲುಸಿಲ್, ಈನೋ – ಖಾಲೀ ಮಾಡ್ಲೇ ಬೇಕಾಗತ್ತೆ. ಆದ್ರೆ ಇದರ ಬದಲು ನ್ಯಾಚುರಲ್ ಆಗಿ ದಿನಾ ಸಿಗೋ ಅಂತ, ನಮ್ಮ ಮನೇಗಳಲ್ಲಿ ಇರೋ ಅಂತ ವಸ್ತುಗಳೇ ನಮ್ಮ ಅಸಿಡಿಟಿ ಕಮ್ಮಿ ಮಾಡತ್ತೆ ಅಂತ ನಿಮಗೆ ಗೊತ್ತಿತ್ತಾ?

ಅಸಿಡಿಟಿ ಕಮ್ಮಿ ಆಗಕ್ಕೆ ಈ 9 ಮನೆಮದ್ದು ತಿಂದು ನೋಡಿ. ಇದರಿಂದ ಹೋಗದೆ ಇದ್ದರೆ ಮಾತ್ರ ಮಾತ್ರೆ/ಡಾಕ್ಟರ್ ಕಡೆ ತಿರುಗಿ ನೋಡಿ.

ಬಾಳೆಹಣ್ಣು

ಇವು ಹೆಚ್ಚು ಖನಿಜಾಂಶ ಹೊಂದಿದ್ದು, ದೇಹದ ಪಿಎಚ್ ಜಾಸ್ತಿ ಮಾಡಿ ಅಸಿಡಿಟಿ ಕಮ್ಮಿ ಆಗತ್ತೆ. ಬಾಳೆಹಣ್ಣಲಿರೋ ನಾರಿನ ಅಂಶ ಆಹಾರ ಜೀರ್ಣ ಆಗಕ್ಕೆ ಸಹಾಯ ಮಾಡತ್ತೆ. ಹೆಚ್ಚು ಬಾಳೆಹಣ್ಣು ತಿಂದಷ್ಟೂ ಬೇಗ ಆಸಿಡಿಟಿ ಕಮ್ಮಿ ಆಗತ್ತೆ.

ತುಳಸಿ

ಇದರಲ್ಲಿ ಹುಣ್ಣುಗಳನ್ನು, ಹೊಟ್ಟೆ ಅಲ್ಸರ್ ಗಳನ್ನೂ ತಡ್ಯೋ ಗುಣ ಇದೆ. ಇದು ಹೊಟ್ಟೆಗೆ ಹೆಚ್ಚಿನ ಮ್ಯೂಕೋಸ್ ಸಿಗೋದಿಕ್ಕೆ ಸಹ ಸಹಾಯ ಮಾಡತ್ತೆ. ಇದರಿಂದ ಗ್ಯಾಸ್ ಆಗೋದು ಕಮ್ಮಿ ಆಗತ್ತೆ. ಅಸಿಡಿಟಿಯಿಂದ ಬೇಗ ಮುಕ್ತಿ ಸಿಗಕ್ಕೆ ನಾಕೈದು ತುಳಸಿ ಎಲೆ ತಿನ್ನಬಹುದು.

ತಣ್ಣಗಿನ ಹಾಲು

ಹಾಲಲ್ಲಿ ತುಂಬಾ ಹೆಚ್ಚಿನ ಮಟ್ಟದಲ್ಲಿ ಖನಿಜಾಂಶಗಳು ಇರತ್ತೆ. ಇದು ಹೆಚ್ಚಿನ ಆಸಿಡ್ ಹೀರಿಕೊಂಡು ಅಸಿಡಿಟಿ ಕಮ್ಮಿ ಮಾಡತ್ತೆ; ತಣ್ಣಗಿರೋ ಹಾಲು ಕುಡ್ಯೋದ್ರಿಂದ ಗಂಟಲುರಿ ಕಮ್ಮಿ ಆಗತ್ತೆ. ಆದರೆ ಇದರ ಜೊತೆ ಸಕ್ಕರೆ, ಜೇನುತುಪ್ಪ ಏನೂ ಸೇರಿಸ್ಕೋಬಾರದು. ಹಾಗೇ ಕುಡೀಬೇಕು. ಒಂದು ಚಮಚ ತುಪ್ಪ ಹಾಕಿಕೊಂಡು ಕುಡಿದ್ರೆ ಇನ್ನೂ ಒಳ್ಳೇದು.

ಸೋಂಪು

ಸೋಂಪು ತಿನ್ನೋದ್ರಿಂದ ಹೊಟ್ಟೆ ಬಿಗಿತ ಕಮ್ಮಿ ಆಗತ್ತೆ. ಇದರಲ್ಲಿ ಹೊಟ್ಟೆಯ ಅಲ್ಸರ್ ಕಮ್ಮಿ ಮಾಡೋ ಗುಣ ಸೋಂಪಿಗೆ ಇದೆ. ಅದಕ್ಕೇ ಇದನ್ನ ಹೋಟೆಲ್ ಗಳಲ್ಲಿ ಕೊಡೋದು.

ಜೀರಿಗೆ

ಇದು ಆಹಾರ ಜೀರ್ಣ ಆಗಕ್ಕೆ ಮಾತ್ರ ಅಲ್ಲ, ದೇಹದ ಜೀರ್ಣ ಕ್ರಿಯೆ ಚೆನ್ನಾಗಾಗಕ್ಕೂ ಸಹಾಯ ಮಾಡತ್ತೆ. ಗ್ಯಾಸ್ ಕಮ್ಮಿ ಮಾಡಿ ಹೊಟ್ಟೆಯ ಎಷ್ಟೋ ಸಮಸ್ಯೆಗಳನ್ನ ಕಮ್ಮಿ ಮಾಡತ್ತೆ. ಇದನ್ನ ನೀರಲ್ಲಿ ಕುದಿಸಿ, ಆರಿಸಿ ಕುಡ್ಯೋದ್ರಿಂದ ಆಸಿಡಿಟಿ ಕಮ್ಮಿ ಆಗತ್ತೆ.

ಲವಂಗ

ಲವಂಗ ತಿನ್ನೋದ್ರಿಂದ ಹೊಟ್ಟೇಲಿ ಆಹಾರ ಚಲಿಸೋಕೆ ಸಹಾಯ ಆಗತ್ತೆ. ಮತ್ತೆ ಇದರ ಘಾಟು ವಾಸನೆಯಿಂದ ಹೆಚ್ಚಿನ ರಸಗಳು ಒಸರಿ, ಜೀರ್ಣಕ್ಕೆ ಸಹಾಯ ಆಗತ್ತೆ. ಒಂದು ಲವಂಗ ಅಗಿದು, ಬಾಯಲ್ಲಿ ಒತ್ತರಿಸಿ ಇಟ್ಕೊಳ್ಳೋದ್ರಿಂದ ನಿಧಾನವಾಗಿ ಅದರ ರಸ ಒಸರ್ತಾ ಇರೋ ಹಾಗೆ, ಅಸಿಡಿಟಿ, ಗಂಟಲುರಿ ಎಲ್ಲಾ ಕಮ್ಮಿ ಆಗ್ತಾ ಹೋಗತ್ತೆ.


ಏಲಕ್ಕಿ

ಏಲಕ್ಕಿ ಕಫ, ಪಿತ್ತ, ವಾತ ಮೂರಕ್ಕೂ ಒಳ್ಳೇದು ಅಂತ ಆಯುರ್ವೇದದಲ್ಲಿ ಹೇಳಿದ್ಯಂತೆ. ಇದು ಹೊಟ್ಟೆ ಹಿಂಡೋದನ್ನ ಕಮ್ಮಿ ಮಾಡತ್ತೆ. ಒಂದೆರಡು ಏಲಕ್ಕೀನ ನೀರಲ್ಲಿ ಕುದಿಸಿ, ಆರಿಸಿ ಆ ನೀರನ್ನ ಕುಡಿದ್ರೆ ಅಸಿಡಿಟಿ ಕಮ್ಮಿ ಆಗತ್ತೆ.

ಶುಂಠಿ

ಇದು ನಮ್ ದೇಶದಲ್ಲಿ ಬಹುಶಃ ಎಲ್ಲಾರ್ ಮನೇಲೂ ಇದ್ದೇ ಇರತ್ತೆ. ಇದು ಹೊಟ್ಟೇಲಿ ಆಹಾರ ಹೀರಿಕೊಳ್ಳೋದಕ್ಕೆ ಸಹಾಯ ಮಾಡಿ, ಜೀರ್ಣ ಆಗೋ ಹಾಗೆ ಮಾಡತ್ತೆ. ಅಲ್ದೇ ಇದು ನಿಮ್ಮ ಆಹಾರದಲ್ಲಿರೋ ಪ್ರೋಟೀನ್ ಗಳನ್ನೂ ಸಹ ಬೇರೆ ಮಾಡತ್ತೆ. ಎಷ್ಟೋ ಹೊಟ್ಟೆ ಹುಣ್ಣುಗಳು ಶುಂಠಿ ತಿನ್ನೋದ್ರಿಂದ ಕಮ್ಮಿ ಆಗತ್ವೆ. ಒಂಚೂರು ಹಸಿಶುಂಠಿ ಹಾಗೇ ಕಚ್ಚಿ ತಿನ್ಬೋದು; ಇಲ್ಲಾ ಅದನ್ನ ನೀರಲ್ಲಿ ಕುದಿಸಿ, ಆರಿಸಿ ಆ ನೀರು ಕುಡೀಬಹ್ದು. ಇಲ್ಲಾ ಒಂಚೂರು, ಶುಂಠೀನೂ, ಸಕ್ಕರೇನೂ ದವಡೇ ಹತ್ತಿರ ಒತ್ತರಿಸಿ ಕಚ್ಚಿ ನಿಧಾನವಾಗಿ ಅದರ ರಸ ಹೀರಬಹುದು. ಆಸಿಡಿಟಿ ಬೇಗ ಕಮ್ಮಿ ಆಗತ್ತೆ.

 

ನೆಲ್ಲಿಕಾಯಿ

ನೆಲ್ಲೀಕಾಯಿಲಿ ಆಸ್ಕಾರ್ಬಿಕ್ ಆಸಿಡ್ ಅಂತ ಇರತ್ತಂತೆ. ಇದು ಕಫ, ಪಿತ್ತ ಎರಡನ್ನೂ ಕಮ್ಮಿ ಮಾಡತ್ತೆ. ಒಂದು ಟೀ ಚಮಚ ನೆಲ್ಲೀಕಾಯಿ ಪುಡೀನ ದಿನ ತಿಂದ್ರೆ, ಜೀರ್ಣಕ್ಕೆ ಒಳ್ಳೇದು. ಆಸಿಡಿಟೀನೂ ಕಮ್ಮಿ ಆಗತ್ತೆ.

ಮುಂದಿನಸಲ ನಿಮಗೆ ಆಸಿಡಿಟಿ ಬಂದ್ರೆ, ಆ ಆಂಟಾಸಿಡ್ ಬಾಟಲ್ ಬಿಸಾಕಿ, ಮನೆಮದ್ದು ಮಾಡಿ. ಇದು ನೂರಾರು ವರ್ಷಗಳಿಂದ ಉಪಯೋಗ ಆಗ್ತಾನೇ ಬಂದಿದೆ 

LEAVE A REPLY

Please enter your comment!
Please enter your name here