Home Entertainment 15 ಭಾಷೆಯಲ್ಲಿ ಡಿ ಬಾಸ್ ಸಿನಿಮಾ ರಿಲೀಸ್ ಅಗತ್ತಾ?ಚಿತ್ರ ತಂಡ ಎನ್ ಹೇಳತ್ತೆ? ನೊಡಿ ಒಮ್ಮೆ

15 ಭಾಷೆಯಲ್ಲಿ ಡಿ ಬಾಸ್ ಸಿನಿಮಾ ರಿಲೀಸ್ ಅಗತ್ತಾ?ಚಿತ್ರ ತಂಡ ಎನ್ ಹೇಳತ್ತೆ? ನೊಡಿ ಒಮ್ಮೆ

7601
0

ನಾಗರೀಕತೆಯ ತೊಟ್ಟಿಲು ಭರತ ಖಂಡದ ಮಹಾದೃಶ್ಯಕಾವ್ಯ ಮಹಾಭಾರತದ ಕ್ಲೈಮ್ಯಾಕ್ಸ್ ಕಥೆ ಈಗ ಬೆಳ್ಳಿತೆರೆ ಮೇಲೆ ವಿಜೃಂಭಿಸೋ ಸಮಯವಾಗಿದೆ. ಸ್ವಚ್ಚ ಕನ್ನಡದಲ್ಲಿ ತಯಾರಾದ ಕುರುಕ್ಷೇತ್ರ ವೈಭವ ವಿಶ್ವದಾದ್ಯಂತ ರಾರಾಜಿಸಲಿದೆ.

ಕನ್ನಡ ಚಿತ್ರರಂಗದ ಟ್ರೆಂಡ್ ಬದಲಾಗಿದೆ. ಅದನ್ನು ಬ್ರ್ಯಾಂಡ್ ಮಾಡೋಕ್ಕೆ ಎಂದು ಕನ್ನಡದ ಕಟ್ಟಾಳುಗಳು ಹಗಲಿರುಳು ದುಡಿಯುವುದರ ಜೊತೆ ತೊಡೆತಟ್ಟಿ ನಿಲ್ತಿದ್ದಾರೆ. ಡಾ ರಾಜ್​ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್​ರ ನಂತರ ಇಂದಿನ ಯಂಗ್​ಸ್ಟರ್​ಗಳು ಕೂಡ ಅದೇ ಹಾದಿಯಲ್ಲಿ, ಕನ್ನಡದ ನಾಡು-ನುಡಿ, ಸಂಸ್ಕೃತಿಯನ್ನ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.

ಈ ನಿಟ್ಟಿನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಹಿಂದೆಯೇ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸೋ ಮೂಲಕ ಭಲೇ ಕನ್ನಡಿಗ ಅನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ತೆರೆಕಂಡು ಮಾನ್​ಸ್ಟರ್ ಹಿಟ್ ಆದ ರಾಕಿಂಗ್ ಸ್ಟಾರ್ ಯಶ್​ರ ಕೆಜಿಎಫ್ ಪ್ಯಾನ್ ಇಂಡಿಯನ್ ಸಿನಿಮಾ ಆಗಿ ಎಲ್ಲರ ಮನಗೆದ್ದಿದೆ. ನೂರುಕೋಟಿ ಕಲೆಕ್ಷನ್ ಮೂಲಕ ಕನ್ನಡ ಸಿನಿದುನಿಯಾದ ಮಾರುಕಟ್ಟೆಗೆ ಬಹುದೊಡ್ಡ ಬುನಾದಿ ಹಾಕಿಕೊಟ್ಟಿದೆ.

ಇದೆಲ್ಲಾ ಗೊತ್ತಿರೋ ಸುದ್ದಿನೇ ಗುರೂ. ಹೊಸತೇನಿದೆ ಹೇಳಿ ಅಂತ ಗೊಣಗಬೇಡಿ. ಏಕೆಂದರೆ ಇಲ್ಲಿಯವರೆಗೂ ಆಗಿರೋ ಎಲ್ಲಾ ಬೆಳವಣಿಗೆಗಳಿಗೂ ಮೀರಿದಂತಹ ಸ್ಪೆಷಲ್ ಸ್ವೀಟ್ ನ್ಯೂಸ್ ಒಂದಿದೆ. ಅದು ಸ್ಯಾಂಡಲ್​ವುಡ್ ಚಕ್ರವರ್ತಿ, ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್ ದರ್ಶನ್​ ಹಾಗೂ ಅವರ ಕುರುಕ್ಷೇತ್ರ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರಿಯರ್​ನ ಪ್ರತಿಷ್ಠಿತ ಹಾಗೂ ಮೈಲಿಗಲ್ಲು ಸಿನಿಮಾ ಕುರುಕ್ಷೇತ್ರ, ಈಗ ಅಖಂಡ ಭಾರತದ ಮೂಲೆ ಮೂಲೆಯಲ್ಲೂ ರಾರಾಜಿಸಲಿದೆ. ಈ ಮಹಾ ದೃಶ್ಯಕಾವ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯೋ ನಿಟ್ಟಿನಲ್ಲಿ ಟೀಂ ಕುರುಕ್ಷೇತ್ರ ಸತತ ಎರಡು ವರ್ಷದಿಂದ ಹಗಲಿರುಳು ದುಡಿಯುತ್ತಿದೆ.

ಸದ್ಯ ಕನ್ನಡ ಚಿತ್ರರಂಗದ ಬಹುದೊಡ್ಡ ತಾರಾಗಣದ ಒನ್ ಅಂಡ್ ಓನ್ಲಿ ಸಿನಿಮಾ ಕುರುಕ್ಷೇತ್ರ. ನೂರಾರು ಕಲಾವಿದರು, ಸಾವಿರಾರು ಸಹ ಕಲಾವಿದರು, ನುರಿತ ತಂತ್ರಜ್ಞರ ಅವಿರತ ಶ್ರಮದ ಫಲ ಈ ಕುರುಕ್ಷೇತ್ರ. ಮನೆ ಕಟ್ಟೋಕೇ ಸಮಯ ಹಿಡಿಯುತ್ತೆ ಅಂದಾಗ ಅರಮನೆ ಕಟ್ಟೋಕೆ ಕೊಂಚ ಜಾಸ್ತಿನೇ ಟೈಮ್ ಹಿಡಿಯುತ್ತೆ ಅಂತಾರೆ. ಅದ್ರಂತೆ ಕುರುಕ್ಷೇತ್ರ ಊಹೆಗೂ ಮೀರಿದ ಸಿನಿಮಾ. ಹಾಗಾಗಿ ಲೇಟ್ ಆದರು ಲೇಟೆಸ್ಟ್ ಆಗಿ ತೆರೆಗೆ ಬರಲಿದೆ.

ಅಂದಹಾಗೆ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಭಾಷೆಗಳಲ್ಲಿ ದರ್ಶನ್ ದರ್ಶನ ಕೊಡಲಿದ್ದಾರೆ. ಹೌದು.. ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ರಿಲೀಸ್ ಮಾಡೋ ಪ್ಲಾನ್ ಮಾಡಿದ್ದ ಟೀಂ ಕುರುಕ್ಷೇತ್ರ, ಇದೀಗ ಅದನ್ನ ಆಲ್ ಇಂಡಿಯನ್ ಲಾಂಗ್ವೇಜಸ್​ನಲ್ಲಿ ರಿಲೀಸ್ ಮಾಡೋ ಪ್ಲಾನ್ ಮಾಡ್ತಿದೆ. ಆಲ್ ಇಂಡಿಯನ್ ಭಾಷೆಗಳಲ್ಲಿ ಮಿಂಚು ಹರಿಸ್ತಿರೋ ಮೊದಲ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಕುರುಕ್ಷೇತ್ರ ಭಾಜನವಾಗ್ತಿದೆ.

ತ್ರೀಡಿಯಲ್ಲಿ ಕೂಡ ತೆರೆಗೆ ಬರಲಿರೋ ಕುರುಕ್ಷೇತ್ರ ಸಿನಿಮಾ ಬರೀ ಭಾರತದ 15 ಭಾಷೆಯಲ್ಲಷ್ಟೇ ಅಲ್ಲ, ಸಪ್ತ ಸಾಗರದಾಚೆಗಿನ ವಿದೇಶಗಳಲ್ಲೂ ರಿಲೀಸ್ ಮಾಡ್ತಿದ್ದಾರೆ. ಓವರ್​ಸೀಸ್ ರಿಲೀಸ್ ಇದ್ದೇ ಇರೋದೇ ಅಲ್ವಾ ಅಂದುಕೊಂಡ್ರೆ ಅದು ತಪ್ಪಾಗುತ್ತೆ. ವಿದೇಶದಲ್ಲಿ ಕುರುಕ್ಷೇತ್ರ ಕನ್ನಡದ ಹೊರತಾಗಿ ಚೀನಾ ಹಾಗೂ ಜಪಾನ್​ನಲ್ಲಿ ಅವ್ರದ್ದೇ ಚೈನೀಸ್ ಹಾಗೂ ಜಪಾನೀಸ್ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ.

ಇದೇ ಮೊದಲ ಬಾರಿ ನಮ್ಮ ಕನ್ನಡದ ಸಿನಿಮಾವೊಂದು ಚೀನಾ ಹಾಗೂ ಜಪಾನ್​ನಲ್ಲಿ ಅವ್ರದ್ದೇ ಭಾಷೆಗಳಲ್ಲಿ ಕಮಾಲ್ ಮಾಡಲಿದೆ. ತಿರುಗಿ ನೋಡು ಒಮ್ಮೆ ಕನ್ನಡದ ಹೆಮ್ಮೆ ಅನ್ನೋ ರೀತಿ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗ ಇದನ್ನ ಎದೆ ತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳೋ ರೀತಿ ಮಾಡ್ತಿದೆ ಚಿತ್ರತಂಡ.

ನ್ಯಾಷನಲ್ ಸ್ಟಾರ್​ ಆಗಿ ಮಿಂಚ್ತಿರೋ ಸುದೀಪ್ ಹಾಗೂ ಯಶ್ ಸಾಲಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಹೊಸದಾಗಿ ಸೇರ್ಪಡೆ ಆಗ್ತಿದ್ದಾರೆ. ಅಂದಹಾಗೆ ಕುರುಕ್ಷೇತ್ರ ಸಿನಿಮಾದಿಂದ ದಚ್ಚು ಬರೀ ನ್ಯಾಷನಲ್ ಸ್ಟಾರ್ ಅಷ್ಟೇ ಅಲ್ಲ, ಇಂಟರ್​ ನ್ಯಾಷನಲ್ ಸ್ಟಾರ್ ಆಗಿಯೂ ಮಿಂಚು ಹರಿಸಲಿದ್ದಾರೆ. ಅಮೋಘ ಅಭಿನಯದಿಂದ ಕುಲಕೋಟಿ ಕನ್ನಡಿಗರ ಮನಗೆದ್ದಿರೋ ದಚ್ಚುಗೆ ವಿದೇಶಗಳಲ್ಲೂ ಫ್ಯಾನ್ಸ್ ಇದ್ದಾರೆ. ಹಾಗಾಗಿ ಅನಿವಾಸಿ ಕನ್ನಡಿಗರ ಜೊತೆ ವಿದೇಶಿಗರೂ ಈ ಮಹಾದೃಶ್ಯಕಾವ್ಯವನ್ನ ಕಣ್ತುಂಬಿಕೊಳ್ಳಲಿದ್ದಾರೆ.

ಸದ್ಯ ಸೆನ್ಸಾರ್ ಅಂಗಳದಲ್ಲಿ ಯುಎ ಸರ್ಟಿಫಿಕೆಟ್ ಪಡೆದಿರೋ ಕುರುಕ್ಷೇತ್ರ, ತ್ರೀಡಿ ಅವತರಣಿಕೆಯ ದ್ವಿತಿಯಾರ್ಧ ಡಿಐ ನಡೆಯುತ್ತಿದೆ. ಚೆನ್ನೈನಲ್ಲಿ ಅದ್ರ ಕೆಲಸ ಕಾರ್ಯಗಳು ಭರದಿಂದ ಸಾಗ್ತಿದ್ದು, ನಿರ್ದೇಶಕರಾದ ವಿ ನಾಗೇಂದ್ರ ಪ್ರಸಾದ್- ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಇದನ್ನು 2ಡಿ ಜೊತೆ ತ್ರೀಡಿಯಲ್ಲೂ ಏಕಕಾಲದಲ್ಲಿ ಪ್ರೇಕ್ಷಕರ ಮುಂದೆ ತರಲಿದ್ದಾರೆ.

ಎಲ್ಲಾ ಅಂದುಕೊಂಡಂತಾದ್ರೆ, ಫೆಬ್ರವರಿಯಲ್ಲಿ ಕುರುಕ್ಷೇತ್ರ ವೈಭವ ದೊಡ್ಡ ಪರದೆ ಮೇಲೆ ಮೂಡಲಿದೆ. ಇನ್ನು ಕೆಜಿಎಫ್​ ರೀತಿ ದೊಡ್ಡ ಮಟ್ಟದಲ್ಲಿ ಪ್ರಮೋಷನ್ಸ್ ಪ್ಲಾನ್ ಮಾಡ್ತಿರೋ ಟೀಂ ಕುರುಕ್ಷೇತ್ರ, ಮಸ್ತ್ ಮ್ಯಾಜಿಕ್ ಮಾಡೋದು ಕನ್ಫರ್ಮ್​.ಕ್ರುಪೆ:ಡಿ ಬಾಸ್ ಪೆಜ್ ಟೀV-೫

LEAVE A REPLY

Please enter your comment!
Please enter your name here