Home Uncategorized ಶಾಕಿಂಗ್ ಸುದ್ದಿ – ತಿಥಿ ಖ್ಯಾತಿಯ ಗಡ್ದಪ್ಪ ಇನ್ನಿಲ್ಲ!

ಶಾಕಿಂಗ್ ಸುದ್ದಿ – ತಿಥಿ ಖ್ಯಾತಿಯ ಗಡ್ದಪ್ಪ ಇನ್ನಿಲ್ಲ!

1466
0

ತಿಥಿ ಎಂಬ ಕನ್ನಡದ ಪ್ರಯೋಗಾತ್ಮಕ ಸಿನಿಮಾದಲ್ಲಿ ತನ್ನ ಸಹಜ ಅಭಿನಯದಿಂದ ಕರ್ನಾಟಕದ ಮನೆ ಮಾತಾಗಿದ್ದ ತಿಥಿ ಗಡ್ಡಪ್ಪ ಉರ್ಫ್ ಚನ್ನೇಗೌಡ ತೀವ್ರ ಅನಾರೋಗ್ಯದಿಂದ ಬಳಲಿ ಇಂದು ಇಹಲೋಕ ತ್ಯಜಸಿದ್ದಾರೆ.

ಥಿ’ ಚಿತ್ರದ ಮೂಲಕ ಮನೆಮಾತಾದ ಹಿರಿಯ ನಟ ಗಡ್ಡಪ್ಪ, ಆನಂತರ ‘ತರ್ಲೆ ವಿಲೇಜ್’, ‘ಹಳ್ಳಿ ಪಂಚಾಯಿತಿ’, ‘ಹಾಲುತುಪ್ಪ’, ‘ಗಡ್ಡಪ್ಪನ ದುನಿಯಾ’, ‘ಕಂತ್ರಿಬಾಯ್ಸ್’, ‘ಜಾನಿ ಜಾನಿ ಎಸ್ ಪಪ್ಪಾ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ ತಮಗೆ ಸಿಕ್ಕ ಜನಪ್ರಿಯತೆಯ ಅರಿವಿಲ್ಲದೆ ಅವರು ತಮ್ಮ ಊರಿನಲ್ಲೇ ಉಳಿದುಕೊಂಡು, ಎಲ್ಲರೊಂದಿಗೂ ಬೆರೆಯುತ್ತಿದ್ದರು. ಆದರೆ ಇನ್ನು ಅವರು ನೆನಪು ಮಾತ್ರ.. ಅವರ ಆತ್ಮಕ್ಕೆ ಶಾಂತಿ ಸಿಗಲಿ.


ಗಡ್ದಪ್ಪ ಅವರು ಸುಮಾರು 15 ದಿನಗಳಿಂದ paralysis ನಿಂದ ಬಳಲುತ್ತಿದ್ದರು. ಮೂಲತಃ ಪಾಂಡವಪುರ ಹಳ್ಳಿಯಲ್ಲಿ ವಾಸವಾಗಿದ್ದ ಚಿನ್ನೇಗೌಡರು ಅಲ್ಲೇ ಆಸತ್ರೆಗೆ ದಾಖಲಾಗಿದ್ದರು. ತಮ್ಮ ಬಂಧು ಬಂದವರು ಕೂಡ ಅದೇ ಆಸ್ಪತ್ರೆಯಲ್ಲಿ ಗಡ್ಡಪ್ಪನನ್ನು ನೋಡಿಕೊಳ್ಳುತ್ತಿದ್ದರು. ಇವತ್ತು ಮಧ್ಯಾಹ್ನ ಸುಮಾರು 4 ಘಂಟೆಗೆ ಗಡಪ್ಪ ಅವರು ಆಸ್ಪತ್ರೆಯಲ್ಲಿ ತೀರಿ ಕೊಂಡಿದ್ದಾರೆ. ಗಡ್ಡಪ್ಪನ ಹೆಂಡತಿ ಬಹಳ ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು

LEAVE A REPLY

Please enter your comment!
Please enter your name here