Home Entertainment ರ‍್ಯಾಪಿಡ್ ರಶ್ಮಿ ಮೊದಲನೇ ಗಂಡ ಯಾರು ಗೊತ್ತಾ ? ಕರಾಳ ಸತ್ಯ ಹೇಳಿದ ರಶ್ಮಿ

ರ‍್ಯಾಪಿಡ್ ರಶ್ಮಿ ಮೊದಲನೇ ಗಂಡ ಯಾರು ಗೊತ್ತಾ ? ಕರಾಳ ಸತ್ಯ ಹೇಳಿದ ರಶ್ಮಿ

4957
0

ಬಿಗ್ ಬಾಸ್ ಸೀಸನ್-6ರಲ್ಲಿ ರ್ಯಾಪಿಡ್ ರಶ್ಮಿ ತಮ್ಮ ವೈಯಕ್ತಿಕ ಜೀವನದ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನನ್ನ ಕಥೆ ಎಂಬ ಚಟುವಟಿಕೆಯನ್ನ ಕೊಟ್ಟಿತ್ತು ಈ ಚಟುವಟಿಕೆಯಲ್ಲಿ ಸ್ಪರ್ದಿಗಳು ತಮ್ಮ ಜೀವನದಲ್ಲಿ ನಡೆದ ಕಥೆಗಳನ್ನ ಹೇಳಬೇಕಿತ್ತು.ಈ ವೇಳೆ ರಶ್ಮಿ ತಮ್ಮ ಜೀವನದ ಕಹಿ ನೆನಪನ್ನ ಮನೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಬಿಚ್ಚಿಟ್ಟಿದ್ದಾರೆ.

ನನಗೆ 2007ರಲ್ಲಿ ಮದುವೆಯಾಗಿತ್ತು ಆದರೆ ಆ ಮದುವೆ ಕೇವಲ ಎರಡು ವರ್ಷಗಳ ಕಾಲವಿತ್ತು.ಕೆಲವು ಕಾರಣಾಂತರಗಳಿಂದ ಆ ಮದುವೆ ಮುರಿದು ಬಿತ್ತು.ನಾನೇ ಆ ಮದುವೆಯಿಂದ ಹೊರಬಂದು ಡಿವೋರ್ಸ್ ಪಡೆಯಲು ನಿರ್ಧರಿಸಿದೆ.ನನ್ನ ತಾಯಿಗೂ ಡಿವೋರ್ಸ್ ಆಗಿದೆ.ಅವರ ರೀತಿ ನನ್ನ ಜೀವನ ಕೂಡ ಆಗಿದೆ ಎಂದು ಅವರು ಸಾಕಷ್ಟು ನೋವಿನಲ್ಲಿದ್ದರು.

ನಾನು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾಗ ನನ್ನ ತಾಯಿ ನನ್ನ ಬಳಿ ಮಾತನಾಡುತ್ತಿರಲಿಲ್ಲ.ಈ ವೇಳೆ ತಾಯಿಯವರ ಸ್ನೇಹಿತೆ ಬಂದು ನಾವಿಬ್ಬರೂ ಮಾತನಾಡುವಂತೆ ಮಾಡಿದ್ದರು.ನಾನು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದಾಗ ಆಗ ತಾನೇ ನಾನು ಆರ್ ಜೆ ಆಗಿದ್ದೆ. ಈ ವಿಷಯ ಎಲ್ಲಾರಿಗೂ ಗೊತ್ತಾದರೆ ಏನಾಗುತ್ತೋ ಎಂಬ ಭಯ ನನಗೆ ಕಾಡುತ್ತಿತ್ತು ಎಂದು ರಶ್ಮಿ ಹೇಳಿದ್ದಾರೆ.

ವಿಚ್ಛೇಧನ ಪಡೆದ ಬಳಿಕ ನನ್ನ ಜೀವನದಲ್ಲಿ ನಾನು ಡೇವಿಸ್ ರನ್ನು ಭೇಟಿಮಾಡಿದೆ.ನನ್ನ ಮೊದಲ ಮದುವೆ ಮುರಿದುಬಿದ್ದ ಕಾರಣ ನಾನು ತುಂಬಾ ಬೇಸರದಲ್ಲಿದ್ದೆ.ಈ ವೇಳೆ ಡೇವಿಸ್ ನನಗೆ ಆತ್ಮ ವಿಶ್ವಾಸ ತುಂಬಿದ್ದರು.

ಅಲ್ಲದೆ 2010 ರಿಂದ 2013 ರವರೆಗೂ ನಾನು ಡೇವಿಸ್ ಪ್ರೀತಿಸುತ್ತಿದವಿ ಬಳಿಕ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದೀವಿ.ಡೇವಿಸ್ ಗೆ ಇದು ಮೊದಲ ಮದುವೆಯಾಗಿತ್ತು ಅವರ ಕುಟುಂಬದವರು ನನ್ನನ್ನು ಒಪ್ಪಲಿಲ್ಲ ಆದ್ರೂ ಡೇವಿಸ್ ನನ್ನನ ಮದುವೆಯಾಗಲು ನಿರ್ಧಾರ ಮಾಡಿದ್ದರು ಎಂದು ರಶ್ಮಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here