Home News ಬಿಗ್ ಬ್ರೇಕಿಂಗ್: ಚಾಮರಾಜನಗರ ದೇವಸ್ಥಾನದ ಪ್ರಸಾದದಲ್ಲಿ ವಿಷ ನಾನೇ ವಿಷ ಹಾಕಿದ್ದು ಎಂದು ತಪ್ಪೊಪ್ಪಿಕೊಂಡ ಮಹಿಳೆ

ಬಿಗ್ ಬ್ರೇಕಿಂಗ್: ಚಾಮರಾಜನಗರ ದೇವಸ್ಥಾನದ ಪ್ರಸಾದದಲ್ಲಿ ವಿಷ ನಾನೇ ವಿಷ ಹಾಕಿದ್ದು ಎಂದು ತಪ್ಪೊಪ್ಪಿಕೊಂಡ ಮಹಿಳೆ

588
0

ಚಾಮರಾಜನಗರ ಜಿಲ್ಲೆಯ ಹನೂರಿನ ಸುಳವಾಡಿಯ ವಿಷ ಪ್ರಸಾದ ಸೇವನೆಯ ಪ್ರಕರಣ ಇಡೀ ರಾಜ್ಯವನ್ನೂ ದುಃಖದಲ್ಲಿ ಮುಳುಗಿಸಿದೆ. ಪ್ರಸಾದ ತಯಾರಿಸಿದ ನಂತರ ಅದನ್ನು ಭಕ್ತರಿಗೆ ಹಂಚುವ ಮುನ್ನ ಅಡುಗೆಯವರಾದ ಪುಟ್ಟಸ್ವಾಮಿ ಎಂಬುವವರು ಒಮ್ಮೆ ಪ್ರಸಾದವನ್ನು ತಿಂದಿದ್ದರು. ಆಗಲೇ ಅವರಿಗೆ ಪ್ರಸಾದ ಎಂದಿನಂತಿಲ್ಲ ಎಂಬ ಅನುಮಾನ ಬಂದಿತ್ತು.

ಪ್ರಸಾದದಲ್ಲಿ ವಿಲಕ್ಷಣ ವಾಸನೆಯೂ ಗೋಚರಿಸಿತ್ತು. ಆದರೆ ಪ್ರಸಾದ ತಿಂದ ಕೆಲ ಹೊತ್ತಾದರೂ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.ಆದರೆ ದುರಂತ ಎಂದರೆ ಪ್ರಸಾದ ಸೇವಿಸಿದ ಪುಟ್ಟಸ್ವಾಮಿ ಅವರ 12 ವರ್ಷ ವಯಸ್ಸಿನ ಮಗಳು ನಳಿನಿ ಮೃತರಾಗಿದ್ದಾಳೆ ನಳಿನಿ ಸ್ಥಳೀಯ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದಳು.

ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್ ಎಂಬವನ ಪತ್ನಿ ಅಂಬಿಕಾ ಮಹಿಳೆ ನಾನೇ ವಿಷ ಹಾಕಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎರಡು ದಿನಗಳ ಹಿಂದೆ ಅಂಬಿಕಾ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಸೂಚನೆ ಮೇರೆಗೆ ಪ್ರಸಾದದಲ್ಲಿ ವಿಷ ಹಾಕಿದ್ದೇನೆ ಎಂದು ಹೇಳಿದ್ದಾಳಂತೆ. ಇಂದು ರಾತ್ರಿ ಸುಳ್ವಾಡಿ ಮಾರಮ್ಮ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ವ್ಯವಸ್ಥಾಪಕ ಮಾದೇಶ್, ಮಾದೇಶನ ಪತ್ನಿ ಅಂಬಿಕಾ, ಪೂಜಾರಿ ಮಹದೇವ ಮತ್ತಿತ್ತರ ಬಂಧನ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here