Home Entertainment ಪ್ರಾಣಿಪ್ರಿಯ ದರ್ಶನ್ ಈಗ ಇಂಥಹ ಒಳ್ಳೆಯ ಕೆಲಸ ಮಾಡಿದ್ದಾರೆ ನೋಡಿ?ಇಂಟ್ರೆಸ್ಟಿಂಗ್ ಸ್ಟೋರಿ!

ಪ್ರಾಣಿಪ್ರಿಯ ದರ್ಶನ್ ಈಗ ಇಂಥಹ ಒಳ್ಳೆಯ ಕೆಲಸ ಮಾಡಿದ್ದಾರೆ ನೋಡಿ?ಇಂಟ್ರೆಸ್ಟಿಂಗ್ ಸ್ಟೋರಿ!

124
0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಾಣಿ ಪ್ರಿಯ. ಪ್ರಾಣಿಗಳ ಜತೆಗೆ ಪರಿಸರವನ್ನೂ ಪ್ರೀತಿಸುವ ದಾಸ ಈಗ, ಇದಕ್ಕೆ ಮುಕುಟ ಎಂಬಂತೆ ಈಗ ಮತ್ತೊಂದು ಅದ್ಭುತ ಕೆಲಸ ಮಾಡಲು ಹೊರಟಿದ್ದಾರೆ. ಆ ಕುರಿತ ಒಂದು ವರದಿ ಇಲ್ಲಿದೆ.


ಸ್ಯಾಂಡಲ್‍ವುಡ್‍ನ ‘ಒಡೆಯ’, ‘ಯಜಮಾನ’ ಅಂತೆಲ್ಲ ಕರೆಸಿಕೊಳ್ಳೋ ದರ್ಶನ್, ಮೈಸೂರು ಮೃಗಾಲಯದಲ್ಲಿನ ಕೆಲವು ಪ್ರಾಣಿಗಳಿಗೂ ಯಜಮಾನನಾಗಿರೋದು ಗೊತ್ತಿದೆ. ದರ್ಶನ್ ಈಗಾಗಲೇ ಅಲ್ಲಿ ಆನೆ, ಹುಲಿಯನ್ನ ದತ್ತು ತೆಗೆದುಕೊಂಡಿರುವ ದಚ್ಚು ಅವುಗಳನ್ನು ಸಾಕಿ ಸಲಹುತ್ತಿದ್ದಾರೆ.


ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿರೋ ದರ್ಶನ್ ಮಲೆ ಮಹದೇಶ್ವರ ಕಾಡನ್ನ ದತ್ತು ತೆಗೆದುಕೊಳ್ಳೋ ನಿರ್ಧಾರಕ್ಕೆ ಬಂದಿದ್ದಾರಂತೆ. ಹೌದು ಕೇವಲ ಪ್ರಾಣಿಗಳನ್ನು ಅಷ್ಟೇ ಅಲ್ಲ ಪರಿಸರವನ್ನೂ ಪ್ರೀತಿಸುವ ದಚ್ಚು ಈಗ ವನ ಸೇವಕನಾಗಿ ಪ್ರಕೃತಿಯ ಸೇವೆ ಮಾಡಲು ಬಯಸುತ್ತಿದ್ದಾರಂತೆ.

ಈ ಬಗ್ಗೆಮಾತನಾಡಿರುವ ದರ್ಶನ್ ಆಪ್ತಗೆಳೆಯ ಹಾಗೂ ನಿರ್ಮಾಪಕ ಉಮಾಪತಿ ‘ದರ್ಶನ್​ ಈಗ ಮಲೆ ಮಹದೇಶ್ವರ ಕಾಡನ್ನು ದತ್ತು ಪಡೆಯಲು ಯೋಚಿಸುತ್ತಿದ್ದಾರೆ. ಅವರಿಗೆ ಅನುಮತಿ ಸಿಕ್ಕರೆ, ಕಾಡನ್ನು ಅಭಿವೃದ್ಧಿಪಡಿಸುವುದರೊಂದಿಗೆ ಅಲ್ಲಿರುವ ಗುತ್ತಿಗೆ ನೌಕರರಿಗೂ ಆರ್ಥಿಕ ಸಹಾಯ ಮಾಡಲು ನಿರ್ಧರಿಸಿದ್ದಾರೆ’ ಎಂದಿದ್ದಾರೆ.
ಒಟ್ಟಾರೆ ದರ್ಶನ್ ಕೇವಲ ರೀಲ್​ನಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಸಹ ಸಮಾಜ ಮುಖಿ ಕೆಲಸ ಮಾಡ್ತಿದ್ದಾರೆ. ಆ ಮೂಲಕ ತಮ್ಮ ಲಕ್ಷಾಂತರ ಅಭಿಮಾನಿಗಳನ್ನ ಇಂತಹ ಕೆಲಸಕ್ಕೆ ಪ್ರೋತ್ಸಾಹಿಸುವ ಮೂಲಕ ಬೇರೆಯವರಿಗೂ ಮಾದರಿಯಾಗುತ್ತಿದ್ದಾರೆ.

Sponsored

LEAVE A REPLY

Please enter your comment!
Please enter your name here