Home Entertainment ದಾಸನ ದಯಾ ಗುಣ ಅರಣ್ಯ ಇಲಾಖೆಯ ಗುತ್ತಿಗೆ ನೌಕರರ ಕಷ್ಟಕ್ಕೆ ಮಿಡಿದ ದರ್ಶನ್​..!

ದಾಸನ ದಯಾ ಗುಣ ಅರಣ್ಯ ಇಲಾಖೆಯ ಗುತ್ತಿಗೆ ನೌಕರರ ಕಷ್ಟಕ್ಕೆ ಮಿಡಿದ ದರ್ಶನ್​..!

220
0

ದರ್ಶನ್ ಸ್ಯಾಂಡಲ್‍ವುಡ್‍ನ ‘ಡಿ ಬಾಸ್’. ಅಭಿಮಾನಿಗಳ ಪ್ರೀತಿಯ ಯಜಮಾನ. ದರ್ಶನ್ ಇಂದು ಬಾಕ್ಸಾಫಿಸ್‍ನ ಸುಲ್ತಾನ್. ದರ್ಶನ್ ಸಿನಿಮಾ ಬರುತ್ತೆ ಅಂದರೆ ಬಾಕ್ಸಾಫಿಸ್‍ಗೂ ನಡುಕ ಉಂಟಾಗುತ್ತೆ. ಇಂತಹ ಸ್ಥಾನ ದರ್ಶನ್‍ಗೆ ಸುಖಾಸುಮ್ಮನೆ ಒಲಿದಿದ್ದಲ್ಲ. ದರ್ಶನ್ ಕೂಡ ಆರಂಭದಲ್ಲಿ ಕಷ್ಟಗಳನ್ನ ಎದುರಿಸಿದವರೆ. ಸಂಕಷ್ಟಗಳ ಬೆಂಕಿಗೆ ಮೈ ಒಡ್ಡಿದವರೆ. ಆದರೆ ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದು ಈಗ ಇತಿಹಾಸ.

ಹೀಗಾಗಿನೇ ದರ್ಶನ್ ಕಷ್ಟದಲ್ಲಿರೋರನ್ನ ಕಂಡರೆ ಕರಗಿ, ಮರುಗುತ್ತಾರೆ. ಯಾರೇ ತಮ್ಮ ಸಂಕಷ್ಟವನ್ನ ಡಿ-ಬಾಸ್ ಮುಂದೆ ತೋಡಿಕೊಂಡರೂ, ತಮ್ಮ ಕೈಲಾದ ಸಹಾಯ ಮಾಡಲು ಹಿಂಜರಿಯುವುದಿಲ್ಲ ಈ ದಾಸ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ದರ್ಶನ್ ಅವರ ಈ ದೊಡ್ಡಗುಣವನ್ನ ಹೇಳೋಕೆ, ಅವರಲ್ಲಿನ ಒಳ್ಳೆಯ ಗುಣದ ಬಗ್ಗೆ ಮಾತಾಡೋಕೆ, ಅವರ ಸಮಾಜಮುಖಿ ಕಾರ್ಯದ ಬಗ್ಗೆ ಬರೆಯೋಕೆ ಮತ್ತೊಂದು ಘಟನೆ ನಮ್ಮ ಮುಂದಿದೆ. ಹೌದು, ಇತ್ತೀಚಿಗೆ ಮಹದೇಶ್ವರ ಬೆಟ್ಟದ ಕಳ್ಳಬೇಟೆ ತಡೆ ಶಿಬಿರಕ್ಕೆ ದರ್ಶನ್ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಅಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುವ ನೌಕರರು ತಮ್ಮ ದುಃಖ ದುಮ್ಮಾನಗಳನ್ನ ಸ್ಯಾಂಡಲ್‍ವುಡ್ ಒಡೆಯನ ಬಳಿ ಹೇಳಿಕೊಂಡಿದ್ದಾರೆ.

ಜನರಿಂದ ಆಯ್ಕೆಯಾಗಿ, ಜನರಿಗಾಗಿ ಕೆಲಸ ಮಾಡಬೇಕಾದ ರಾಜಕಾರಣಿಗಳ ಮುಂದೆ ಯಾರಾದರೂ ಕಷ್ಟಗಳನ್ನ ಹೇಳಿಕೊಂಡರೆ ಅವರು ಮಾಡುತ್ತಿವಿ ಅಂತ ಸುಮ್ಮನಾಗುತ್ತಾರೇನೋ? ಆದರೆ ದರ್ಶನ್​ರದ್ದು ಅಂತಹ ಜಾಯಮಾನವಲ್ಲ. ಅವರು ರೀಲ್‍ನಲ್ಲಿ ಮಾತ್ರ ಜನಸೇವಕ ಅಲ್ಲ. ರಿಯಲ್ ಲೈಫ್‍ನಲ್ಲಿಯೂ ಕಷ್ಟಗಳಿಗೆ ತಕ್ಷಣವೇ ಮಿಡಿಯೋ ನಿಜನಾಯಕ. ಅದು ಗುತ್ತಿಗೆ ನೌಕಕರರ ವಿಷ್ಯದಲ್ಲಿಯೂ ಸಾಬೀತಾಗಿದೆ. ಗುತ್ತಿಗೆ ನೌಕರರ ಕ್ಷೇಮಾಭಿವೃದ್ದಿ ದೃಷ್ಟಿಯಿಂದ ಅರಣ್ಯ ಇಲಾಖೆಗೆ 12 ಲಕ್ಷ ದೇಣಿಗೆ ನೀಡಿದ್ದಾರೆ. ಅದನ್ನ ಬ್ಯಾಂಕ್‍ನಲ್ಲಿಟ್ಟು ಅದರಲ್ಲಿ ಬಂದ ಬಡ್ಡಿ ಹಣದಿಂದ ನೌಕರರ ಕಷ್ಟಕ್ಕೆ ನೆರವು ನೀಡಬೇಕೆಂದು ಅರಣ್ಯ ಇಲಾಖೆಯನ್ನ ಕೋರಿದ್ದಾರೆ ದರ್ಶನ್.

ಅದಕ್ಕೆ ದರ್ಶನ್​ ಅಭಿಮಾನಿಗಳು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡುತ್ತಿದ್ದಾರೆ.

 

LEAVE A REPLY

Please enter your comment!
Please enter your name here