Home Entertainment ಕೆಜಿಎಫ್ ಸಿನಿಮಾ ಐದು ದಿನಗಳ ಕಲೆಕ್ಷನ್ ಎಷ್ಟು ಗೊತ್ತಾ???ಕನ್ನಡ ಚಿತ್ರರಂಗದಲ್ಲೆ ಗಡಿ ದಾಟಿದ ಮೊದಲ ಸಿನಿಮಾ?

ಕೆಜಿಎಫ್ ಸಿನಿಮಾ ಐದು ದಿನಗಳ ಕಲೆಕ್ಷನ್ ಎಷ್ಟು ಗೊತ್ತಾ???ಕನ್ನಡ ಚಿತ್ರರಂಗದಲ್ಲೆ ಗಡಿ ದಾಟಿದ ಮೊದಲ ಸಿನಿಮಾ?

2601
0

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ,ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ.ಐದು ಭಾಷೆಯಲ್ಲಿ ರಿಲೀಸ  ಆಗಿದ್ದು ಇದು ಕನ್ನಡ ಸಿನಿಮಾಗಳಲ್ಲಿಯೆ ಉತ್ತಮವಾದ ಕಲೆಕ್ಷನ್ ಮಾಡಿದ ಚಿತ್ರ.

ಕೆಜಿಎಫ಼್  ಆರ್ಭಟಕ್ಕೆ ಬಾಕ್ಸಾಫೀಸ್ ಉಡೀಸ್ ಆಗಿದೆ. ಇಲ್ಲಿಯವರೆಗೂ ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ನೂರು ಕೋಟಿ ಕ್ಲಬ್ ಲಿಸ್ಟ್ ಅನ್ನುವುದು ಮರೀಚಿಕೆಯಾಗಿತ್ತು. ಆದರೆ ‘ಕೆಜಿಎಫ್’ ಸಿನಿಮಾ ಐದೇ ದಿನಕ್ಕೆ ನೂರು ಕೋಟಿ ಕ್ಲಬ್ ಲಿಸ್ಟ್ ಸೇರಿದ ಕನ್ನಡದ ಮೊದಲ ಚಿತ್ರವಾಗುವುದರ ಮೂಲಕ ಸ್ಯಾಂಡಲ್‍ವುಡ್ ಅನ್ನು ಹೊಸ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ.

ಕೆಜಿಎಫ್ ರಿಲೀಸ್ ಆದ ಐದೇ ದಿನದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಚಿತ್ರದ ಮೂಲಗಳು ಮಾಹಿತಿ ನೀಡಿವೆ. 4 ದಿನಕ್ಕೆ 77 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿತ್ತು. ಈಗ ಸ್ಕ್ರೀನ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವ ಜೊತೆಗೆ ಕ್ರಿಸ್‍ಮಸ್ ರಜೆ ಇರುವ ಕಾರಣ ಭರ್ಜರಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದು ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡುವ ಮೂಲಕ ತನ್ನ ಹಿರಿಮೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

LEAVE A REPLY

Please enter your comment!
Please enter your name here