ಕೆಜಿಎಫ್ ಸಿನಿಮಾ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರರಂಗವನ್ನ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ ಯಶ್ ಅಭಿನಯದ ಕೆಜಿಎಫ್ ಚಿತ್ರ, ಹಾಗೆ ಅನೇಕ ಸ್ಟಾರ್ ನಟರು ಕೂಡ ಯಶ್ ಅವರ ಕೆಜಿಎಫ್ ಸಿನಿಮಾ ನೋಡಿ ಮೆಚ್ಚುಗೆಯ ಮಾತನ್ನ ಆಡಿದ್ದಾರೆ.
ಹೌದು, ದರ್ಶನ್ ಅವರು ತಮ್ಮ ಒಡೆಯ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಮೈಸೂರಿನಲ್ಲಿ ಕೆಜಿಎಫ್ ಸಿನಿಮಾ ನೋಡಿದ್ದು, ಯಶ್ ಮತ್ತು ಚಿತ್ರತಂಡದ ಬಗ್ಗೆ ಒಳ್ಳೆಯ ಮಾತುಗಳನ್ನ ಆಡಿದ್ದಾರೆ, ಅಲ್ಲದೆ ಮಾಧ್ಯಮದವರು ನೀವು ಪ್ರಶಾಂತ್ ನೀಲ್ ಅವರ ಜೊತೆ ಸಿನಿಮಾ ಮಾಡ್ತೀರಾ ಎಂದು ಕೇಳಿದ ಪ್ರಶ್ನೆಗೆ, ಕಾಲ ಕೂಡಿ ಬಂದರೆ ಎಲ್ಲವು ಸಾಧ್ಯ ಎಂದು ದರ್ಶನ್ ಹೇಳಿದ್ದಾರೆ.
ಒಂದ್ಕಾಲದಲ್ಲಿ ಕನ್ನಡ ಸಿನಿಮಾಗಳಿಗಾಗಿ ಅಕ್ಕಪಕ್ಕದ ಫಿಲ್ಮ್ ಮೇಕರ್ಸ್ ಕಾಯ್ತಿದರು. ಕೆಜಿಎಫ್ ಒನ್ಸ್ ಅಗೇನ್ ಅಂತದ್ದೇ ಸಂಚಲನ ಸೃಷ್ಟಿಸಿದೆ. ಇದು ಹೀಗೆ ಮುಂದುವರೆಯಬೇಕು. ಇಂತಹ ಇನ್ನಷ್ಟು ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸೋಕೆ ಬರ್ಬೇಕು.