Home Entertainment ‘ಕೆಜಿಎಫ್’ ನಲ್ಲಿ ಅರೆ ಹುಚ್ಚನ ಪಾತ್ರ ಮಾಡಿದ್ದ ನಟ ಇನ್ನಿಲ್ಲ !ಶಾಕಿಂಗ್ ಸುದ್ದಿ

‘ಕೆಜಿಎಫ್’ ನಲ್ಲಿ ಅರೆ ಹುಚ್ಚನ ಪಾತ್ರ ಮಾಡಿದ್ದ ನಟ ಇನ್ನಿಲ್ಲ !ಶಾಕಿಂಗ್ ಸುದ್ದಿ

1539
0

ಕೆಜಿಎಫ್ ಸದ್ಯ ದೇಶಾದ್ಯಂತ ಭಾರಿ ಸದ್ದುಮಾಡುತ್ತಿರುವ ಕನ್ನಡದ ಸಿನಿಮಾ,ಕನ್ನಡಿಗರು ಮಾತ್ರವಲ್ಲದೆ ಇಡೀ ಭಾರತವೇ ಕೆಜಿಎಫ್ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ.ಐದು ಭಾಷೆಯಲ್ಲಿ ರಿಲೀಸ  ಆಗಿದ್ದು ಇದು ಕನ್ನಡ ಸಿನಿಮಾಗಳಲ್ಲಿಯೆ ಉತ್ತಮವಾದ ಕಲೆಕ್ಷನ್ ಮಾಡಿದ ಚಿತ್ರ.

ಚಿತ್ರದಲ್ಲಿನ ಪ್ರತಿಯೊಬ್ಬ ಪಾತ್ರಧಾರಿಯೂ ಅದ್ಭುತವಾಗಿ ನಟಿಸಿದ್ದು, ಈ ಪೈಕಿ ಅರೆ ಹುಚ್ಚನಾಗಿ ಅಭಿನಯಿಸಿದ್ದ ಲಕ್ಷ್ಮೀಪತಿ, ಚಿತ್ರ ಬಿಡುಗಡೆಗೂ ಮುನ್ನವೇ ಸಾವನ್ನಪ್ಪಿದ್ದರೆಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ, ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ವಿಟ್ಟರ್ ನಲ್ಲಿ ಲಕ್ಷ್ಮೀಪತಿ ಅವರ ನಿಧನದ ಸುದ್ದಿ ಜೊತೆಗೆ ಅವರು ಅಭಿನಯಿಸಿರುವ ದೃಶ್ಯದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಜಾಂಡೀಸ್ ನಿಂದ ಬಳಲುತ್ತಿದ್ದ ಲಕ್ಷ್ಮೀಪತಿ ಕೆಜಿಎಫ್ ಚಿತ್ರ ತೆರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆಂದು ಹೇಳಲಾಗಿದ್ದು, ಭುವನ್ ಗೌಡ ಶೇರ್ ಮಾಡಿರುವ ಲಕ್ಷ್ಮಿಪತಿ ಅಭಿನಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಲ್ಲದೆ ಜಾಲತಾಣಿಗರು ಲಕ್ಷ್ಮೀಪತಿ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here