Home Featured-Articals ಕೆಜಿಎಫ್ ಅನ್ನೇ ಆಡವಿಟ್ಟಿದ್ದರು ನೆಹರೂ?ಕೆಜಿಎಫ್ ಹಾಗೂ ನೆಹರೂಗೆ ಏನು ಸಂಭಂದ್ದ ಅಂತೀರಾ ..? ನೊಡಿ ಒಮ್ಮೆ

ಕೆಜಿಎಫ್ ಅನ್ನೇ ಆಡವಿಟ್ಟಿದ್ದರು ನೆಹರೂ?ಕೆಜಿಎಫ್ ಹಾಗೂ ನೆಹರೂಗೆ ಏನು ಸಂಭಂದ್ದ ಅಂತೀರಾ ..? ನೊಡಿ ಒಮ್ಮೆ

1584
0

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಸೃಷ್ಟಿಸಿರೋ ಹವಾ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದೆ. ಯಾವ ಮಟ್ಟಿಗೆ ಅಂದರೆ, ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಇತಿಹಾಸದಲ್ಲೇ ಕನ್ನಡದ ಚಿತ್ರವೊಂದು ಇಷ್ಟೊಂದು ಪ್ರಚಾರ ಪಡೆದದ್ದು ಇದೇ ಮೊದಲು.

ರಾಕಿಂಗ್ ಸ್ಟಾರ್ ಅಭಿನಯದ  ಕೆಜಿಎಫ್ ತೆರೆಗೆ ಅಪ್ಪಳಿಸಿದ ಬೆನ್ನಲ್ಲೇ,ಕೆಜಿಎಫ್ ಎಂಬ ಚಿನ್ನದ ಉರೂ ಕೂಡಾ ಚರ್ಚೆಯ ಕೇಂದ್ರವಾಗಿದೆ .
ಇತ್ತೀಚಿನ ದಿನಿಗಳಲ್ಲಿ ಕೋಲಾರ ಗೋಲ್ಡ್ ಫಿಲ್ಡ್ ಎಂದರೆ ಎಷ್ಟೋ ಜನರಿಗೆ ಗೊತ್ತೆ ಇರದಹಾಗೆ ಮರೆತುಹೋಗಿತ್ತು.ಆದ್ರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಮತ್ತೆ ದೇಶದ ಗಮನವನ್ನ ಕೆಜಿಎಫ್ ಕಡೆ ತಿರುಗುವಂತೆ ಮಾಡಿದೆ.

ಹೌದು ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರೂ ಕೆಜಿಎಫ್ ಅನ್ನು ಆಡವಿಟ್ಟಿದ್ದರು.

ಕೆಜಿಎಫ್ ಹಾಗೂ ನೆಹರೂಗೆ ಏನು ಸಂಭಂದ್ದ ಅಂತೀರಾ ..?

ಕೆಜಿಎಫ್ ಭಾರತದ ಇತಿಹಾಸದಲ್ಲಿ ಚಿನ್ನದ ಯುಗವನ್ನ ತಂದುಕೊಟ್ಟ ಚಿನ್ನದ ಗಣಿ. ಹೀಗಾಗಿಯೇ ಕೆಜಿಎಫ್ ಅನ್ನು ಚಿನ್ನದ ಉರೂ ಎಂದು ಕರೆಯಲ್ಪಡುತಿತ್ತು.ಇದೆ ಕಾರಣಕ್ಕೆ ಕೆಜಿಎಫ್ ನ್ನನ್ನು ಬ್ರಿಟಿಷರು ಮಿನಿ ಇಂಗ್ಲೆಂಡ್ ಎನ್ನುವ ಹೆಸರಿನಿಂದ ಕರೆದರು.

1947 ಆಗಸ್ಟ್​ 15ರಂದು ಭಾರತ ಸ್ವಾತಂತ್ರ್ಯಗೊಂಡಾಗ ದೇಶದಲ್ಲಿ ಬಡತನ ತಾಂಡವವಾಡುತ್ತಿತ್ತು. ನಿರಂತರ ಬರಗಾಲ, ನಿರುದ್ಯೋಗ, ದೇಶ ವಿಭಜನೆಯಿಂದಾಗಿ ಎಲ್ಲೆಡೆ ದೊಂಬಿ ಗಲಾಟೆ, ಕೋಮು ಗಲಭೆಗಳು, ಇಂಥಹ ಸಾಲು ಸಾಲು ಸಮಸ್ಯೆಗಳು ಪ್ರಧಾನಿ ಜವಾಹರಲಾಲ್​ ನೆಹರು ಅವರಿಗೆ ದೊಡ್ಡ ಸವಾಲನ್ನೇ ಮುಂದಿಟ್ಟಿದ್ದವು. ಭಾರತ ದೇಶವನ್ನ ಕಟ್ಟಬೇಕು ಅಂದರೆ, ವಿಶ್ವಬ್ಯಾಂಕ್ ನಲ್ಲಿ ಸಾಲ ಪಡೆಯಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಆದರೆ ಭಾರತಕ್ಕೆ ಸಾಲ ಕೊಡಲು ವಿಶ್ವ ಬ್ಯಾಂಕ್​ ಸಿದ್ಧವಿರಲಿಲ್ಲ.

ಬಡತನದ ಬೇಗುದಿಯಲ್ಲಿ ಬೇಯುತ್ತಿದ್ದ ಭಾರತಕ್ಕೆ ಕೊಟ್ಟ ಸಾಲ ವಾಪಾಸ್​ ಬರುತ್ತೆ ಎನ್ನುವ ಯಾವುದೇ ಗ್ಯಾರಂಟಿ ವಿಶ್ವಬ್ಯಾಂಕ್ ಗೆ ಇರಲಿಲ್ಲ. ಇದೇ ಕಾರಣಕ್ಕೆ ಸಾಲ ನೀಡಲು ಶೂರಿಟಿ (ಜಾಮೀನು) ಕೇಳಿತ್ತು. ವಿಶ್ವಬ್ಯಾಂಕ್ ನಿಂದ ಸಾಲ ಪಡೆಯೋಕೆ ನೆಹರು, ದೇಶದ ಯಾವುದಾದರು ಬೆಲೆ ಬಾಳುವ ಪ್ರದೇಶವನ್ನ ಅಡವಿಡುವ ಚಿಂತನೆ ಮಾಡುತ್ತಾರೆ. ಆಗ ಅವರ ನೆನಪಿಗೆ ಬಂದಿದ್ದೇ ಬಂಗಾರದ ಮೊಟ್ಟೆಗಳನ್ನ ತನ್ನೊಡಲಿನಲ್ಲಿ ಇಟ್ಟುಕೊಂಡಿದ್ದ ಕೆಜಿಎಫ್​. ಕೋಲಾರ ಗೋಲ್ಡ್​ ಫೀಲ್ಡ್​​​​ ಎನ್ನುವ ಚಿನ್ನದ ಭೂಮಿಯನ್ನ ಅಡವಿಡಲು ಪ್ರಧಾನಿ ನೆಹರು ನಿರ್ಧರಿಸಿದ್ದರು. ಕೆಜಿಎಫ್​ ಹೆಸರು ಕೇಳುತ್ತಿದ್ದಂತೆ ವಿಶ್ವಬ್ಯಾಂಕ್ ಭಾರತಕ್ಕೆ ಸಾಲವನ್ನ ವಿತರಿಸಿತ್ತು.

ಸ್ವತಂತ್ರ ಭಾರತದ ಅಭಿವೃದ್ಧಿಗೆ ಕೆಜಿಎಫ್​ನ ಪಾತ್ರ ಬಹಳಷ್ಟಿದೆ. ಕೆಜಿಎಫ್​ ಇಲ್ಲದೇ ಹೋಗಿದ್ದಿದ್ದರೆ, ಸ್ವತಂತ್ರ ಭಾರತಕ್ಕೆ ಸಾಲ ಕೂಡ ಸಿಗುತ್ತಿರಲಿಲ್ಲ. ಕನ್ನಡಿಗರ ಹೆಮ್ಮೆಯ ಭೂಮಿಯನ್ನ ಅಡವಿಟ್ಟಂತಾ ನೆಹರು ಅವರು ಸಾಲ ಪಡೆದು ದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡರು. ಜಲಾಶಯಗಳನ್ನ ನಿರ್ಮಿಸಿದರು, ರಸ್ತೆಗಳನ್ನ ನಿರ್ಮಾಣ ಮಾಡಿದರು. ಶಾಲೆ, ಆಸ್ಪತ್ರೆ, ವಿಜ್ಞಾನ, ತಂತ್ರಜ್ಞಾನ, ಒಂದಾ ಎರಡಾ.. ಭಾರತ ಇಂದು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಲ್ಲೋಕೆ ಬೇಕಾದ ಅಡಿಪಾಯವನ್ನ ನೆಹರು ಅಂದೇ ಹಾಕಿ ಕೊಟ್ಟರು. ನಮ್ಮ ದೇಶದ ಅಡಿಪಾಯ ಭದ್ರಗೊಳ್ಳೋಕೆ ಕಾರಣವೇ ಕನ್ನಡಿಗರ ಕೆಜಿಎಫ್​ ಎನ್ನುವುದನ್ನ ದೇಶ ಮರೆಯುವಂತಿಲ್ಲ.

LEAVE A REPLY

Please enter your comment!
Please enter your name here