Home Entertainment ಅಡ್ಜಸ್ಟ್ ಮಾಡಿಕೊಳ್ಳುವ ಕಾಲ ಮುಗಿಯಿತು! ಎಂದ ಉಪೇಂದ್ರ!!ನೋಡಿ ಒಮ್ಮೆ

ಅಡ್ಜಸ್ಟ್ ಮಾಡಿಕೊಳ್ಳುವ ಕಾಲ ಮುಗಿಯಿತು! ಎಂದ ಉಪೇಂದ್ರ!!ನೋಡಿ ಒಮ್ಮೆ

336
0

ಸ್ಟಾರ್ ಸ್ಟೋರ್ಟ್ಸ್ ಕನ್ನಡ ಚಾನೆಲ್ ಕೊನೆಗೂ ಆರಂಭವಾಗುತ್ತಿದೆ.ಡಿಸೆಂಬರ್ 30ರಿಂದ ಸ್ಟಾರ್ ಸ್ಫೋರ್ಟ್ಸ್ ಕನ್ನಡ ಚಾನೆಲ್ ಆರಂಭಿಸಲು ಸ್ಟಾರ್ ನೆಟ್ ವರ್ಕ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ವೀಕ್ಷಕ ವಿವರಣೆಯನ್ನು ಇಷ್ಟು ದಿನ ಇಂಗ್ಲಿಷ್ ನಲ್ಲಿ ಕೇಳುತ್ತಿದ್ದ ವೀಕ್ಷಕರು ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಕೇಳಿ ನೋಡಿ ಎಂಜಾಯ್ ಮಾಡಬಹುದು. ವಿಶೇಷ ಎಂದರೆ “ಸ್ಟಾರ್ ಸ್ಪೋರ್ಟ್ಸ್ ಕನ್ನಡ” ಚಾನೆಲ್ ಆನ್‌ಲೈನ್‌ ನಲ್ಲೂ ಲಭ್ಯವಾಗಿರುತ್ತದೆ. ಈ ಬಗ್ಗೆ ಅಭಿವೃದ್ಧಿಗೆ ಹತ್ತಿರದಲ್ಲಿರುವ ಮೂಲವು ಭಾರತೀಯ ಟೆಲಿವಿಷನ್.ಕಾಂಗೆ ಮಾಹಿತಿ ನೀಡಿದೆ.

ಈಗಾಗಲೇ ಪ್ರೊ ಲೀಗ್ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸ್ಥಳೀಯ ತಂಡಗಳು ಇರುವುದರಿಂದ ಚಾನೆಲ್ ವರ್ಷವಿಡೀ ಕಾರ್ಯಕ್ರಮಗಳ ಆಯೋಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದು ಸ್ಟಾರ್ ನೆಟ್ ವರ್ಕ್ ತಿಳಿಸಿದೆ. ಪ್ರೊ ಕಬಡ್ಡಿಯಲ್ಲಿ ಬೆಂಗಳೂರು, ಐಪಿಎಲ್ ನಲ್ಲಿ ಆರ್ಸಿಬಿ, ಐಎಸ್ಎಲ್ ನಲ್ಲಿ ಬೆಂಗಳೂರು ಎಫ್ ಸಿ, ಕೆಪಿಎಲ್ ಸೇರಿದಂತೆ ಮುಂತಾದ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಹೆಸರು ಪ್ರಸ್ತಾಪವಾಗಿರುವುದರಿಂದ ಚಾನೆಲ್ ತೆರೆಯಲು ಸ್ಟಾರ್ ನೆಟ್ ವರ್ಕ್ ಮುಂದಾಗಿರುವುದು ಕನ್ನಡಿಗರಿಗೆ ಸಂತಸದ ವಿಚಾರವಾಗಿದೆ.

ಸದ್ಯ ಉಪೇಂದ್ರ ಅವ್ರು ಸ್ಟಾರ್ ಸ್ಪೋರ್ಟ್ ಕನ್ನಡದ ರಾಯಭಾರಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕ್ಕೊಂಡಿದ್ದಾರೆ ಹಾಗೆಯೇ ಅವರೇ ಡಿಸೆಂಬರ್ 29 ರಂದು ಚಾನೆಲ್ ಅನ್ನ ಅನಾವರಣ ಗೊಳಿಸಲಿದ್ದಾರೆ.

LEAVE A REPLY

Please enter your comment!
Please enter your name here