Home FEATURED-ARTICALS ಯುಗಾದಿ ಹಬ್ಬದ ಮಹತ್ವವೇನು? ಆಚರಣೆ ಹೇಗೆ?ತಪ್ಪದೇ ಓದಿ

ಯುಗಾದಿ ಹಬ್ಬದ ಮಹತ್ವವೇನು? ಆಚರಣೆ ಹೇಗೆ?ತಪ್ಪದೇ ಓದಿ

1318
0

ಇಡೀ ಪ್ರಕೃತಿಯಲ್ಲಿ ಗಿಡಮರಗಳು ಚಿಗುರಿ ತುಂಬಾ ಮುದ ಉಂಟುಮಾಡುವ ಕಾಲದಲ್ಲಿ ಪ್ರಪ್ರಥಮವಾಗಿ ಯುಗಾದಿ ಹಬ್ಬ ಬರುತ್ತದೆ.

ಯುಗಾದಿ ಎಂದರೆ ಯುಗದ ಆದಿ ಯುಗದ ಪ್ರಾರಂಭ ‘ಯುಗಸ್ಯ ಆಧಿಃ’ ಈ ಹಬ್ಬ ಹಳೆಯ ಹೊಸತನ್ನು ಸೇರಿಸುವ ಕೊಂಡಿ. ಫಾಲ್ಗುಣ ಬಹುಳ ಅಮಾವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಹೊಸ ವರ್ಷವನ್ನು ಆಚರಿಸುತ್ತೇವೆ. ಈ ಚಾಂದ್ರಮಾನ ಯುಗಾದಿಯನ್ನು ಪ್ರಥಮಾ ತಿಥಿಯಲ್ಲಿಯೇ ಸಾಂಪ್ರದಾಯಿಕವಾಗಿ ಆಚರಿಸಬೇಕು.

ಹಿಂದಿನ ವರ್ಷದ ಕಹೀ ಅನುಭವಗಳನ್ನು ಮರೆತು ಸಿಹಿ ಸಂತಸದ ಕ್ಷಣಗಳನ್ನು ನೆನಸಿಕೊಳ್ಳುತ್ತಾ ಭವಿಷ್ಯದ ಸುಖಕ್ಕಾಗಿ ಯುಗಾದಿಯನ್ನು ಆಚರಿಸುತ್ತೇವೆ.

ಪುರಾಣದ ಹಿನ್ನೆಲೆ :

ಬ್ರಹ್ಮನು ಪರಿಪೂರ್ಣವಾದ ಸೃಷ್ಟಿಕಾರ್ಯವನ್ನು ಮುಗಿಸಿದ್ದು ಯುಗಾದಿಯ ದಿನ. ಶ್ರೀರಾಮಚಂದ್ರನು ಚೈತ್ರಶುದ್ಧ ಪಾಡ್ಯಮಿಯಂದೇ ವಿಜಯೋತ್ಸವ ಆಚರಿಸಿದ.ಉಜ್ಜಯಿನಿಯ ವಿಕ್ರಮಾದಿತ್ಯ ನಮ್ಮ ಶಾಲಿವಾಹನನನ್ನು ಪರಾಭವಗೊಳಿಸಿ ತನ್ನ ಶಕವನ್ನು ಸ್ಥಾಪಿಸಿದ್ದು ಈ ದಿನವೇ.ರಾವಣಾಸುರನನ್ನು ಹಾಗೂ ಅವನ ಆಸುರೀಶಕ್ತಿಯನ್ನು ದಮನ ಮಾಡಿದ್ದ ಯುಗಾದಿ ಶುಭದಿನದಂದು ಶ್ರೀರಾಮಚಂದ್ರ ಪಟ್ಟಾಭಿಷಿಕ್ತನಾಗುತ್ತಾನೆ.ಯುಗಾದಿಯು ಹೀಗೆ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.

ಹಬ್ಬದ ಸಂಪ್ರದಾಯ :

ಹಿಂದುಗಳಲ್ಲಿ ಹೊಸ ವರ್ಷದ ಹಬ್ಬದ ಸಂಭ್ರಮೋಲ್ಲಾಸಗಳಿಂದ ಆಚರಿಸುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲೆದ್ದು ಮನೆಯನ್ನು ಗೋಮಯದಿಂದ ಸಾರಿಸಿ ರಂಗವಲ್ಲಿ ಬಿಡುತ್ತಾರೆ ಮನೆಯನ್ನು ತಳಿರುತೋರಣಗಳಿಂದ ಸಿಂಗಾರಿಸುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಅಭ್ಯಂಜನಸ್ನಾನ ಮಾಡುತ್ತಾರೆ. ಮನೆಯ ಮುಂಭಾಗಕ್ಕೆ ಅಷ್ಟದಳಪದ್ಮ ಸ್ವಸ್ತಿಕ್ ಕಮಲ ಮುಂತಾದ ರಂಗೋಲಿಯನ್ನು ಬಿಡಿಸುತ್ತಾರೆ. ಗೋಶಾಲೆ ತುಳಸೀಕಟ್ಟೆ ದೇವರ ಮನೆಗಳನ್ನು ತಳಿರಿನಿಂದ ಅಲಂಕರಿಸುತ್ತಾರೆ. ಮನೆಯ ಗೋವು ಎತ್ತುಗಳಿಗೆ ಸ್ನಾನ ಮಾಡಿಸಿ ಅವುಗಳಿಗೂ ಬಣ್ಣದ ಅಲಂಕಾರ ಮಾಡಿ ಹೂಗಳಿಂದ ಸಿಂಗರಿಸುತ್ತಾರೆ.

ದೇವರ ಆರಾಧನೆ :

ಅರುಣೋದಯವಾಗುವ ಕಾಲಕ್ಕೆ ದೇವರ ದರ್ಶನ ಮಾಡಿ ದೀಪ ಬೆಳಗಿಸಿ ಗುರು ಹಿರಿಯರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಹೊಸಬಟ್ಟೆಗಳನ್ನು ಮಡಿವಸ್ತ್ರಗಳನ್ನು ಧರಿಸಿಕೊಂಡು ಹಲವು ಪೂಜಾ ಪದ್ದತಿಯಂತೆ ವೈದಿಕರಲ್ಲಿ ಪೂಜೆ ಮಾಡಿಸಿ ಹೊಸ ವರ್ಷದ ಪಂಚಾಂಗವನ್ನಿಟ್ಟು ಪೂಜಿಸುತ್ತಾರೆ ಈ ರೀತಿಯ ಆಚರಣೆಯಿಂದ ಕುಟುಂಬಕ್ಕೆ ವರ್ಷಪೂರ್ಣ ಸಂತಸ, ಸಡಗರ ಒದಗುತ್ತದೆಂಬ ನಂಬಿಕೆಯಿದೆ.

ಬೇವು ಬೆಲ್ಲ ಸ್ವೀಕಾರ :

ಯುಗಾದಿ ಹಬ್ಬದ ವೈಶಿಷ್ಟ್ಯ ಬೇವು ಬೆಲ್ಲಗಳ ಸೇವನೆ ಇವೆರಡನ್ನು ಸೇರಿಸಿ ದೇವರಿಗೆ ನಿವೇದಿಸುತ್ತಾರೆ. ಬೇವಿನ ಹೂವು ಎಲೆಗಿಂತ ಶ್ರೇಷ್ಠವಾದುದು. ವೈಜ್ಞಾನಿಕವಾಗಿ ಹೇಳಬೇಕಾದರೆ ಈ ಸಮಯದಲ್ಲಿ ಬೇಸಿಗೆ ಹೆಚ್ಚಾಗಿ ಶಾಖ ವಿಪರೀತವಾಗಿರುತ್ತದೆ ಆಗ ಮನುಷ್ಯನ ದೇಹದಲ್ಲಿ ಏರುಪೇರುಗಳುಂಟಾಗುತ್ತದೆ ಆಗ ಉಷ್ಣ ಸಂಬಂಧಿತ ಖಾಯಿಲೆಗಳು ಬರುವ ಸಾಧ್ಯತೆ ಇದೆ ಬೇವಿನ ಸೊಪ್ಪನ್ನು ಹೂವನ್ನು ಸೇವಿಸುವುದರಿಂದ ಈ ಖಾಯಿಲೆಗಳು ಗುಣಮುಖವಾಗುತ್ತದೆ. ಬರಿ ಬೇವಿನ ಸೊಪ್ಪನ್ನು ಸೇವಿಸುವುದರಿಂದ ಕಯಿಯಾಗುತ್ತದೆ ಎಂದು ಬೆಲ್ಲವನ್ನು ಸೇರಿಸಿ ತಿನ್ನುತ್ತಾರೆ ಆರೋಗ್ಯ ದೃಷ್ಟಿಯಲ್ಲಿ ಬೇವು ಬೆಲ್ಲವನ್ನು ತಿನ್ನುವುದು ಸೂಕ್ತ.

ಪಂಚಾಂಗ ಶ್ರವಣ ಫಲ :

ಹಬ್ಬದ ದಿನ ಸಾಯಂಕಾಲ ಗ್ರಾಮಸ್ಥರು ದೇವಸ್ಥಾನದಲ್ಲಿ ಸೇರಿ ಪಂಚಾಂಗ ಶ್ರವಣ ಮಾಡುತ್ತಾರೆ. ಊರಿನ ಜೋಯಿಸರು ದೇವಾಲಯದ ಅರ್ಚಕರು ಅಥವಾ ಪುರೋಹಿತರು ಇಡೀ ವರ್ಷದ ಫಲವನ್ನು ಗ್ರಹಗತಿಗಳನ್ನು ಅಂದು ತಿಳಿಸುತ್ತಾರೆ. ಇದರಿಂದ ಮಳೆ ಬೆಳೆ, ರಾಜಕೀಯ ಧರ್ಮ ಗ್ರಹಗಳು ನೀಡುವ ಶುಭಾಶುಭ ಫಲಗಳು ತಿಳಿಯುತ್ತವೆ. ಇದನ್ನು ಕೇಳಿದರೆ ಧೀರ್ಘಾಯುಷಿಗಳು ಕೀರ್ತಿವಂತರೂ ಐಶ್ವರ್ಯವಂತರೂ ಆಗುವುದಲ್ಲದೆ ಪುತ್ರಪೌತ್ರಾಭಿವೃದ್ಧಿಯಾಗುವುದೆಂದು ನಂಬುತ್ತಾರೆ ತಮ್ಮ ರಾಶಿ ಫಲ ತಿಳಿದು ದಕ್ಷಿಣೆ ನೀಡುತ್ತಾರೆ. ನಂತರ ಪೂಜೆ ಮಂಗಳಾರತಿ ಪ್ರಸಾದ ವಿನಿಯೋಗ ಪಡೆದು ಹಸನ್ಮುಖಿಗಳಾಗಿ ಮನೆಗೆ ಹೋಗುತ್ತಾರೆ.

ಚಂದ್ರ ದರ್ಶನ :

ಯುಗಾದಿಯಂದು ಸಂಜೆ ಚಂದ್ರ ದರ್ಶನ ಶುಭಪ್ರದವಾಗುವುದು.ಗಣೇಶ ಚತುರ್ಥಿಯಂದು ಚಂದ್ರನನ್ನು ಕಂಡವರು ಹಲವು ರೀತಿಯ ಕಷ್ಟ ನಿಂದನೆಗಳಿಗೆ ಗುರಿಯಾಗುತ್ತಾರೆ. ಯುಗಾದಿ ದಿನದಂದು ಚಂದ್ರ ದರ್ಶನ ಮಾಡುವುದರಿಂದ ಎಲ್ಲಾ ರೀತಿಯ ಕಷ್ಟಗಳೂ ನಿವಾರಣೆಯಾಗುತ್ತವೆಂದು ನಂಬಿಕೆ ಹಿಂದಿನಿಂದ ರೂಢಿಯಲ್ಲಿದೆ.

ಯುಗಾದಿ ಹಬ್ಬದ ಶುಭಾಶಯಗಳು

ಶರತ್ ಶಾಸ್ತ್ರಿ ಮೈಸೂರು ಜ್ಯೋತಿಷಿಗಳು ಹಾಗು ಪುರೋಹಿತರು ಜಾತಕ ವಿಮರ್ಶೆ ವಾಸ್ತು ಸಲಹೆ ಸಂಖ್ಯಾ ಶಾಸ್ತ್ರ ಮತ್ತು ಯಾವುದೇ ದೋಷ ಪರಿಹಾರಕ್ಕೆ ಸಂಪರ್ಕಿಸಿ 9845371416 Whatsapp ಮೂಲಕ ಹೆಸರು ಜನ್ಮ ದಿನಾಂಕ ಜನ್ಮ ಸಮಯವನ್ನು ಕಲುಯಿಸಿ 9845371416

ಓಂ ಶ್ರೀ ಚೌಡಿ ಮಹಾಕಾಳಿ ಜ್ಯೋತಿಷ್ಯ ಪೀಠಂ ಕೇರಳ ಮಂತ್ರ ಸಿದ್ಧಿ,ವಾಕ್ ಸಿದ್ಧಿ ಪಡೆದ ಜ್ಯೋತಿಷ್ಯರು ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ( 9916888588 ) ನಿಮ್ಮ ಜೀವನದ ಘೋರ ನಿಗೂಢ ಕಠಿಣ ಅತಿ ಜಟಿಲ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಶೀಘ್ರ ಪರಿಹಾರ. ಪುರಾತನ ತಾಳೆ ಗ್ರಂಥ ಶಾಸ್ತ್ರ, ಅಂಜನ ಶಾಸ್ತ್ರ, ಕೇರಳ ಪುರಾತನ ಪೂಜಾ ಪದ್ಧತಿ ಆಧಾರಿತವಾಗಿ, ನಿಮ್ಮ ಎರಡು ಹಸ್ತರೇಖಾ, ಜಾತಕ, ಮುಖಲಕ್ಷಣ ಅಥವಾ ಫೋಟೋ ನೋಡಿ ನಿಮ್ಮ ಮೂಲ ಶೋಧನೆ ಮಾಡಿ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಾದ ಎಷ್ಟೇ ದುಡಿದರೂ ಕೈಯಲ್ಲಿ ದುಡ್ಡು ಕಾಸು ನಿಲ್ಲುವುದಿಲ್ಲ, ಕೊಟ್ಟ ಹಣ ವಾಪಸ್ಸು ಬರಲು, ಎಷ್ಟೇ ಓದಿದರೂ ವಿದ್ಯೆ ಪರೀಕ್ಷೆಯಲ್ಲಿ ತೊಂದರೆ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಯಾಗಲು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿಯರ ಪರಸಂಗ ಬಿಡಿಸಲು, ಗಂಡ-ಹೆಂಡತಿಯ ದಾಂಪತ್ಯ ಕಲಹ, ಮನೆ ಕಟ್ಟುವ ವಿಚಾರ, ವಾಸ್ತು ದೋಷ, ಜಮೀನು ವಿಚಾರ, ಸ್ತ್ರೀ ಕಂಟಕ ದೋಷಗಳು, ಉದ್ಯೋಗ ಸಮಸ್ಯೆ, ಮದುವೆಯಲ್ಲಿ ಅಡೆ ತಡೆ, ಸಂತಾನ ಭಾಗ್ಯ, ಸಂಶಯ ಮಾನಸಿಕ ಚಿಂತೆ, ವಶೀಕರಣ, ಅನಾರೋಗ್ಯ ಸಮಸ್ಯೆ, ಮಾತ್ರೆಯಿಂದ ಗುಣ ಆಗದೆ ಇರುವ ಗುಪ್ತ ರೋಗಗಳು,ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ,ರಾಜಕೀಯ ಯೋಗ, ಮಾಟ-ಮಂತ್ರ, ದುಷ್ಟಶಕ್ತಿ ಪೀಡಾ, ಮಾನಸಿಕ ಖಿನ್ನತೆ, ನಿದ್ರಾಹೀನತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ತಿಳಿಸುತ್ತಾರೆ. ವಿ ಸೂ :- ಸ್ತ್ರೀ ಪುರುಷ ವಶೀಕರಣ, ಜನವಶೀಕರಣ, ಶತ್ರುನಾಶ,ಧನ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಭಾರತದ ನಂ 1 ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ನೊಂದಿದ್ದರೆ, ಇವರನ್ನು ನಂಬಿ ಕರೆಮಾಡಿ ಕಂಡಿತ ಪರಿಹಾರ ಕಂಡುಕೊಳ್ಳಿ. ದೈವಜ್ಞ ಮಹರ್ಷಿ ಶ್ರೀ ರಾಘವೇಂದ್ರ ನಕ್ಷತ್ರಿ 9916888588 ◆◆◆◆◆◆◆◆◆◆◆◆◆◆◆◆◆◆◆◆◆◆◆◆ ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here