Home BOLLYWOOD Tanhaji vs Chhapaak:ಗಳಿಕೆಯಲ್ಲಿ ಅಜಯ್ ದೇವಗನ್ ಹಾಗು ದೀಪಿಕಾ ಸಿನಿಮಾದಲ್ಲಿ ಗೆದ್ದವರು ಯಾರು?

Tanhaji vs Chhapaak:ಗಳಿಕೆಯಲ್ಲಿ ಅಜಯ್ ದೇವಗನ್ ಹಾಗು ದೀಪಿಕಾ ಸಿನಿಮಾದಲ್ಲಿ ಗೆದ್ದವರು ಯಾರು?

198
0

ಅಜಯ್ ದೇವ್‌ಗನ್ ಅವರ ಇತ್ತೀಚಿಗೆ ಬಿಡುಗಡೆಯಾದ ತನ್ಹಾಜಿ ಉತ್ತಮ ವಿಮರ್ಷೆ ಗಳಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಆಡಳಿತ ನಡೆಸುತ್ತಿದೆ.ಈ ಚಿತ್ರವು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ತನ್ಹಾಜಿ ಭಾರತೀಯ ಚಿತ್ರರಂಗದಲ್ಲಿ ಅಜಯ್ ದೇವ್‌ಗನ್ ಅವರ 100 ನೇ ಚಿತ್ರವಾಗಿದ್ದು,ಅವರ ಚಿತ್ರ ಇತ್ತೀಚೆಗೆ ರೂ. 100 ಕೋಟಿ ಹಣವನ್ನ ಬಾಚಿದೆ.

ತನ್ಹಾಜಿಯ ಒಟ್ಟು ಸಂಗ್ರಹ ರೂ. 118.91 ಕೋಟಿ ರೂ. ಈ ಚಲನಚಿತ್ರವು ಛತ್ರಪತಿ ಶಿವಾಜಿಯ ಸೈನ್ಯದ ನಾಯಕ ತನ್ಹಾಜಿ ಮಾಲುಸಾರೆ ಅವರ ಜೀವನವನ್ನು ಆಧರಿಸಿದೆ.ಈ ಚಿತ್ರದಲ್ಲಿ ತನ್ಹಾಜಿ ಮಾಲುಸಾರೆ ಪಾತ್ರವನ್ನು ಅಜಯ್ ದೇವ್‌ಗನ್ ನಿರ್ವಹಿಸಿದ್ದಾರೆ ಮತ್ತು ಇದರಲ್ಲಿ ಕಾಜೋಲ್ ಮತ್ತು ಸೈಫ್ ಅಲಿ ಖಾನ್, ಶರದ್ ಕೆಲ್ಕರ್,ಲ್ಯೂಕ್ ಕೆನ್ನಿ, ನೇಹಾ ಶರ್ಮಾ ಮ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಅಜಯ್ ದೇವ್‌ಗನ್ ಅವರ ತನ್ಹಾಜಿ ದೀಪಿಕಾ ಪಡುಕೋಣೆ ಅವರ ಚಪಾಕ್ ಚಿತ್ರದೊಂದಿಗೆ ಬಿಡುಗಡೆಯಾಯಿತು. ದೀಪಿಕಾ ಅವರ ಚಪಾಕ್ ಚಿತ್ರ ತನ್ಹಾಜಿಗೆ ಹೋಲಿಸಿದರೆ ಚಿತ್ರದ ಗಲ್ಲಾಪೆಟ್ಟಿಗೆಯ ಸಂಗ್ರಹ ಕಡಿಮೆ ಇದೆ. ಇದೇ ಅವಧಿಯಲ್ಲಿ ಚಪಾಕ್ 29 ಕೋಟಿ ರೂ ಹಣವನ್ನ ಗಳಿಸಿದೆ.ಈ ಚಲನಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದಾರೆ.

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here