Home NEWS ಕೊರೊನಾ ವೈರಸ್!ಬಗ್ಗೆ ಜಾಗೃತಿ ಮೂಡಿಸಿದ HANDS TOGETHER HELP TOGETHER ತಂಡ!

ಕೊರೊನಾ ವೈರಸ್!ಬಗ್ಗೆ ಜಾಗೃತಿ ಮೂಡಿಸಿದ HANDS TOGETHER HELP TOGETHER ತಂಡ!

709
0

ವಿಶ್ವದಾದ್ಯಂತ ಭೀತಿ ಹುಟ್ಟಿಸಿರುವ ಕೊರೊನ ವೈರಸ್ಗೆ ಇಡೀ ಪ್ರಪಂಚವೇ ತಲ್ಲಣಗೊಂಡಿದೆ.ಇದೀಗ ಕರ್ನಾಟಕಕ್ಕೂ ಈ ಮಹಾಮಾರಿ ಕೊರೊನ ಕಾಲಿಟ್ಟಿದೆ,ಇದರಿಂದ ಜನರು ಹೆಚ್ಚು ಆತಂಕಕ್ಕೆ ಒಳಗಾಗುತ್ತಿದ್ದಾರೆ.ಕೊರೊನ ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡು ಪ್ರಪಂಚದಾದ್ಯಂತ ಹರಡಿದೆ ,ಇನ್ನು

— ಕೆಮ್ಮು , ಜ್ವರ ಸೀನುವುದು , ಉಸಿರಾಟದ ಸಮಸ್ಯೆ , ಕೆಲ ರೋಗಿಗಳಿಗೆ ವಾಂತಿ ಮತ್ತು ಭೇದಿ .ರೋಗಿಗಳಿಗೆ ಸೋಂಕು ನಿಯಂತ್ರಣಕ್ಕೆ ಬಾರದಿದ್ದಾಗ ನ್ಯುಮೋನಿಯಾ ಹಾಗೂ ಕಿಡ್ನಿ ವೈಫಲ್ಯ ಉಂಟಾಗಿ ಸಾವು ಸಂಭವಿಸುತ್ತದೆ.

— ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ.ಸೋಂಕಿತ ವ್ಯಕ್ತಿಯ ಜೊತೆಗೆ ನಿಕಟ ಸಂಪರ್ಕದಲ್ಲಿದ್ದಾಗ ವೈರಾಣು ಹರಡುವ ಸಾಧ್ಯತೆ ಹೆಚ್ಚು.

ಸೊಂಕಿತ ವ್ಯಕ್ತಿಯೊಂದಿಗೆ ಹಸ್ತಲಾಘವ ಮತ್ತು ಸ್ಪರ್ಶಿಸುವಾಗ.ಸೋಂಕಿತ ವ್ಯಕ್ತಿಯು ಬಳಸಿದ ( ಕರವಸ್ತ್ರ , ಟವಲ್ ) ಇನ್ನಿತರ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ.ಸ್ವಚ್ಛಗೊಳಿಸದ ಕೈಗಳಿಂದ ಕಣ್ಣು , ಮೂಗು ಹಾಗೂ ಬಾಯಿಯನ್ನು ಮುಟ್ಟಿ ಕೊಳ್ಳುವುದರಿಂದ ಈ ಸೋಂಕು ಬೇಗ ಹರಡುತ್ತದೆ.ಇನ್ನು ಈ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ.

ದಿನಕೂಲಿ ಕಾರ್ಮಿಕರು ಹಾಗೂ ಇನ್ನಿತರ ಜನರಿಗೆ ಅಗತ್ಯವಾದ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆ ತಿಳಿದಿರುವುದಿಲ್ಲ ಹಾಗೂ ಅದಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಆರ್ಥಿಕವಾಗಿ ಸದೃಢರಾಗಿರುವುದಿಲ್ಲ.

ಅಂತಹ ಜನರಿಗೆ ಸಹಾಯ ಮಾಡಿದೆ ನಮ್ಮ “HANDS TOGETHER HELP TOGETHER” ಗ್ರೂಪ್.

ಬೆಂಗಳೂರಿನ ಯುವಕ ತಂಡ ರೋನೋಜಾಯ್ ರವರಿಂದ ಶುರುವಾದ HANDS TOGETHER HELP TOGETHER ಎಂಬ ಗ್ರೂಪ್ ವತಿಯಿಂದ ಈ ಕಾರ್ಯ, ಅಲ್ಲಿ 50ಕ್ಕೂ ಹೆಚ್ಚು ಮನೆಗಳು ಮತ್ತು ಪ್ರತ್ಯೇಕವಾಗಿ 150ಕ್ಕೂ ಹೆಚ್ಚು ಜನಗಳಿಗೆ ಸೋಪ್, ಸ್ಯಾನಿಟೈಸರ್, ಮಾಸ್ಕ್ ಮತ್ತು ಹ್ಯಾಂಡ್ವಾಶ್ ಗಳನ್ನು ನೀಡಿ, ಅಲ್ಲಿ ಮುಂಜಾಗ್ರಾ ಕ್ರಮವನ್ನು ಯಶಸ್ವಿಯಾಗಿ ನಡೆಸಿ, ತುಮಕೂರಿನ ಯುವಕರಿಗೂ ಸೇರಿತು. ಅಲ್ಲಿನ ಕೆಲವು ಸ್ವಯಂ ಸೇವಕರು ಸೇರಿಕೊಂಡು ಹಣವನ್ನು ಸಂಗ್ರಹಿಸಿ ಜನರಿಗೆ ಬೇಕಾದ ಅಗತ್ಯ ವಸ್ತುಗಳಾದ ಮಾಸ್ಕ್ , ಹ್ಯಾಂಡ್ ಸ್ಯಾನಿಟೈಸರ್ , ಸೋಪ್ ಗಳನ್ನು ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿ ಹೇಳಿದ್ದಾರೆ.ಇವರ ಈ ಸತ್ಕಾರ್ಯಕ್ಕೆ ಸಹಾಯ ಮಾಡಿದ ಪ್ರತಿ ಒಬ್ಬರಿಗೂ ನಮ್ಮ ಕೃತಜ್ಞತೆಗಳು.

ಇನ್ನೂ ಈ ಗ್ರೂಪ್ ನಿಮ್ಮ ಕಳಕಳಿಯನ್ನು ನೆರವಿಗೆ ತಲುಪಿಸುವ ಡೆಲಿವರಿ ಬಾಯ್ಸ್ ಗಳು ನಾವು ಎಂಬ ಧ್ಯೇಯ ಸ್ಲೋಗನ್ ಬಳಸಿ ಈ ಸತ್ಕಾರ್ಯ ಮಾಡುತ್ತಿರುವುದು ವಿಶಿಷ್ಟ ಹಾಗೂ ಗಮನಾರ್ಹ.

ಒಟ್ಟಾರೆ ಈ ಗುಂಪಿಗೆ ನಾವು ಕೈಲಾದಷ್ಟು ಸಹಾಯ ಮಾಡೋಣ, ಇತರರಿಗೆ ಒಳ್ಳೆಯದನ್ನು ಬಯಸೋಣ. ನಮ್ಮ ನಿಮ್ಮೆಲ್ಲರ ಬೆಂಬಲ ಸದಾಕಾಲ ಹೀಗೆ ಮುಂದುವರಿಯಲಿ…

ಧನ್ಯವಾದಗಳು…

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here