Home HEALTH & FITNESS ಅಸ್ತಮಾಗೆ ಸುಲಭವಾದ ಮನೆ ಮದ್ದುಗಳು.

ಅಸ್ತಮಾಗೆ ಸುಲಭವಾದ ಮನೆ ಮದ್ದುಗಳು.

1461
0

ಅಸ್ತಮಾ ವನ್ನು ಉಬ್ಬಸ , ಗೂರಲು ಮತ್ತು ದಮ್ಮು ಎಂದು ಕೂಡ ಕರೆಯುತ್ತಾರೆ.ಇತ್ತೀಚೆಗೆ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದರಿಂದ ಈ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.ವಿಶೇಷವಾಗಿ ಚಳಿಗಾಲದಲ್ಲಿ ಈ ಕಾಯಿಲೆ ಇರುವವರಿಗೆ ಉಸಿರಾಡಲೂ ಕಷ್ಟಕರವಾಗುತ್ತದೆ.ಈಗಂತಲೂ ವೃದ್ಧರಿಗಷ್ಟೇ ಅಲ್ಲದೆ ಪುಟ್ಟ ಮಕ್ಕಳಿಗೂ ಸಹ ಅಸ್ತಮಾ ಕಾಯಿಲೆ ಆವರಿಸಿಕೊಳ್ಳುತ್ತಿದೆ.

ಅಸ್ತಮಾ ಕಾಯಿಲೆಗೆ ಮೂಲ ಕಾರಣ ರೋಗನಿರೋಧಕಶಕ್ತಿ ಕಡಿಮೆ ಇರುವುದು.ಅಂದ್ರೆ ಇಂಗ್ಲಿಷ್ ನಲ್ಲಿ ಇದನ್ನು ಪ್ರಾಫಿಲ್ಯಾಕ್ಟಿಸ್ ಕಡಿಮೆ ಇರುವುದೆಂದು ಹೇಳುತ್ತಾರೆ.ಈ ಕಾಯಿಲೆ ಇರುವವರು ಧೂಳು ಹಾಗೂ ಹೊಗೆ ಭರಿತ ಪರಿಸರದಿಂದ ಆದಷ್ಟು ದೂರ ಇರಬೇಕು.ಇಂತಹ ಕಲುಷಿತ ಪರಿಸರದಲ್ಲಿ ಇದ್ದರೆ ಕಾಯಿಲೆ ಉಲ್ಬಣವಾಗು ತ್ತದೆ.ಶ್ವಾಸಕೋಶ ತಜ್ಞರ ಪ್ರಕಾರ ಈ ಕಾಯಿಲೆ ಇರುವವರು ಪ್ರಾರಂಭಿಕ ಸ್ಥಿತಿಯಲ್ಲಿದ್ದಾಗಲೇ ಮದ್ದು ಕಂಡುಕೊಂಡರೆ ಈ ಕಾಯಿಲೆಯಿಂದ ಗುಣಮುಖರಾಗಬಹುದು ಹಾಗೂ ಗಂಭೀರ ಪರಿಣಾಮಗಳಿಂದ ಶಾಶ್ವತವಾಗಿ ರಕ್ಷಿಸಿಕೊಳ್ಳಬಹುದು.

ಈ ಕಾಯಿಲೆಯ ಪ್ರಾರಂಭಿಕ ಗುಣಲಕ್ಷಣಗಳನ್ನು ಏನೆಂದರೆ ದೇಹದಲ್ಲಿ ಸುಸ್ತಾಗುವುದು ,ದೇಹದಲ್ಲಿ ನಿಶಕ್ತಿ , ತಲೆ ಭಾರ ಎನಿಸುವುದು ,ಒಂದೇ ಕಡೇ ತಲೆನೋವುಬರುವುದು,ತುಂಬಾ ನಡೆದರೆ ಉಬ್ಸಾ ಮತ್ತು ವಾಂತಿ ಬಂದಂತಾಗುವುದು ,ಬೀಡಿ ಸಿಗರೇಟು ಹೊಗೆ ಮತ್ತು ಧೂಳಿನಿಂದ ಉಸಿರು ಕಟ್ಟುವುದು , ಸಾಮಾನ್ಯವಾಗಿ ಅಲರ್ಜಿಗಳು ಉಂಟಾಗುತ್ತದೆ.

ಅಸ್ತಾಮಾಗೆ ಪರಿಹಾರಗಳು (ಮನೆ ಮದ್ದುಗಳು)

1)ಬೆಳ್ಳುಳ್ಳಿ

ಇದು ಒಂದು ಪ್ರಭಾವಶಾಲಿಯಾದ ಔಷಧಿ.ಬೆಳ್ಳುಳ್ಳಿಯ 5 ಎಸಳುಗಳನ್ನು 30 ಎಂಎಲ್ ಹಾಲಿನೊಂದಿಗೆ ದಿನ ನಿತ್ಯ ಸೇವಿಸುತ್ತಾ ಬಂದರೆ ಅಸ್ತಮಾವನ್ನು ಪ್ರಾರಂಭಿಕ ದಿನಗಳಲ್ಲಿಯೆ ತಡೆಯಬಹುದು.

2)ಲವಂಗ

4 ರಿಂದ 5 ಲವಂಗವನ್ನು ಒಂದು ಲೋಟ ನೀರಿನಲ್ಲಿ ಬೆರಸಿ , ಆ ನೀರು ಅರ್ಧವಾಗುವಷ್ಟು ಕುದಿಸಿ ಆ ನೀರಿನಲ್ಲಿ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ದಿನಕ್ಕೆ ಮೂರು ಬಾರಿಯಂತೆ ಸೇವಿಸುತ್ತ ಬಂದರೆ ಈ ಕಾಯಿಲೆಯನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

3 )ಶುಂಠಿ

ಶುಂಠಿ ಟೀ ಬಿಸಿ ಇರುವಾಗ ಎರಡು ಹೆಸರು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಸೇವಿಸುತ್ತ ಬಂದರೆ ಅಸ್ತಮಾ ಕಾಯಿಲೆಯು ಬಹುಬೇಗ ಗುಣವಾಗುತ್ತದೆ.

4 ) ತುಳಸಿ

ತುಳಸಿಯ 15 ರಿಂದ 20 ಎಲೆಗಳನ್ನು ಚೆನ್ನಾಗಿ ತೊಳೆದು ಅದರೊಂದಿಗೆ 5 ಮೆಣಸಿನ ಕಾಳುಗಳನ್ನು ಸೇರಿಸಿ ಚೆನ್ನಾಗಿ ಅಗಿದು ತಿಂದರೆ ಅಸ್ತಮಾ ತೊಂದರೆಯಿಂದ ತಕ್ಷಣ ಪರಿಹಾರ ಕಂಡುಕೊಳ್ಳಬಹುದು.

5 )ಅರಿಶಿಣ

ಅಸ್ತಮಾವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದು ಚಿಕ್ಕ ಚಮಚ ಅರಿಶಿಣ ಪುಡಿ ಯನ್ನು ಎರಡು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ತಕ್ಷಣ ಪರಿಹಾರ ಕಂಡುಕೊಳ್ಳಬಹುದು.

6)ಅರಿಶಿಣ ಪುಡಿ

ಒಂದು ಚಮಚ ಅರಿಶಿಣ ಪುಡಿಯನ್ನು ಒಂದು ಲೋಟ ಬಿಸಿ ಹಾಲಿನೊಂದಿಗೆ ಬೆರಸಿ ಪ್ರತಿದಿನ ಸೇವಿಸಿದರೆ ಈ ಕಾಯಿಲೆಯಿಂದ ತಾತ್ಕಾಲಿಕವಾಗಿ ಉಪಶಮನವನ್ನು ಪಡೆದುಕೊಳ್ಳಬಹುದು.

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here