Home TELEVISION ಚೈತ್ರಾ ಗೆ ವಾರ್ನಿಂಗ್ ಮಾಡಿದ ಕಿಚ್ಚಾ ಸುದೀಪ್!ಯಾಕೆ ಓದಿ

ಚೈತ್ರಾ ಗೆ ವಾರ್ನಿಂಗ್ ಮಾಡಿದ ಕಿಚ್ಚಾ ಸುದೀಪ್!ಯಾಕೆ ಓದಿ

2364
0
ಚೈತ್ರ ಕೊಟ್ಟೂರು

ಬಿಗ್ ಬಾಸ್ ಸೀಸನ್ ಏಳರ ಏಳನೇ ವಾರ ಸಾಕಷ್ಟು ಆಕರ್ಷಣೆಗಳ ಮೂಲಕ,ಹೊಸ ಹೊಸ ಶಾಕ್ ಗಳ ಮೂಲಕ,ಸೀಕ್ರೆಟ್ ಟಾಸ್ಕ್ ಗಳ ಮೂಲಕ ಜನರನ್ನು ಸಾಕಷ್ಟು ರಂಜಿಸಿತು.ವಾರದ ಮೊದಲ ದಿನ ಒಂದು ವೈಲ್ಡ್ ಕಾರ್ಡ್ ಮತ್ತು ಮಧ್ಯದಲ್ಲಿ ಮತ್ತೊಂದು ಎಂಬಂತೆ ಎರಡು ವೈಲ್ಡ್ ಕಾರ್ಡ್ ಎಂಟ್ರಿ ಆಯಿತು.ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಕ್ಷಾ ಸೋಮಶೇಖರ್ ಮನೆಯೊಳಗೆ ಹೋದರೆ,ಎರಡನೆಯ ವೈಲ್ಡ್ ಕಾರ್ಡ್ ಎಲ್ಲರಿಗೂ ಶಾಕ್ ನೀಡಿತ್ತು.ಕಾರಣ ಈ ಮೊದಲು ಎಲಿಮಿನೇಟ್ ಆಗಿ ಹೊರ ಬಂದಿದ್ದ ಚೈತ್ರ ಕೊಟ್ಟೂರು ಮನೆಯೊಳಗೆ ಬರುವ ಅವಕಾಶ ಮತ್ತೊಮ್ಮೆ ಪಡೆದಿದ್ದರು.

big boss

ಮನೆಯೊಳಗೆ ಎರಡನೇ ಬಾರಿ ಬಂದ ಚೈತ್ರ ಕೊಟ್ಟೂರು ಅವರ ಮಾತು, ನಡವಳಿಕೆ ಹಾಗೂ ತೊಡುವ ಬಟ್ಟೆ ಕೂಡಾ ಬದಲಾಗಿತ್ತು. ಅವರು ಚಿಕ್ಕ ಉಡುಗೆ ತೊಡಲು ಆರಂಭಿಸಿದರು.ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಅವರು ಕೂಡಾ ಚೈತ್ರ ಕೊಟ್ಟೂರು ಎಲ್ಲಾ ಎಪಿಸೋಡ್ ನೋಡಿ ಬಂದಿದ್ದಾರೆ ಅವರನ್ನೇ ಮೊದಲು ಮಾತಾಡಿಸುತ್ತೇನೆ ಎನ್ನುತ್ತಾ,ಯಾವುದೇ ಪ್ರಶ್ನೆ ಕೇಳಿದರೂ ಉತ್ತರ ಶಾರ್ಟ್ ಆಗಿರಲಿ,ಹೆಂಗೂ ನಿಮ್ಮ ಡ್ರೆಸ್ ಕೂಡಾ ಶಾರ್ಟ್ ಆಗಿದೆ ಎನ್ನುವ ಮೂಲಕ,ತುಂಡುಡುಗೆ ತೊಟ್ಟರೆ ಹೆಚ್ಚು ದಿನ ಮನೆಯಲ್ಲಿರ ಬಹುದೆಂಬುದು ಮೂರ್ಖತನ ಎಂದು ಪರೋಕ್ಷವಾಗಿ ಹೇಳಿದಂತೆ ಇತ್ತು.

ಚೈತ್ರ ಕೊಟ್ಟೂರು

ಇನ್ನು ಮನೆಯವರಿಗೆ ಸಜೆಷನ್ ನೀಡಿ ಅಂದಾಗ ಅವರು ಎಲ್ಲರ ತಪ್ಪುಗಳನ್ನು ಎತ್ತಿ ಹಿಡಿದರು. ಆದರೆ ಕಿಶನ್ ಅವರ ಬಗ್ಗೆ ಮಾತನಾಡಿದಾಗ ಮತ್ತೆ ಕೋಪದಿಂದ ಮಾತನಾಡಿದಾಗ,ಸುದೀಪ್ ಅವರು ಇತರರು ಮಾತನಾಡುವಾಗ ಮಧ್ಯೆಯಲ್ಲಿ ಮಾತನಾಡುವಿರಿ,ಕೇಳುವ ತಾಳ್ಮೆ ಕೂಡಾ ಇಲ್ಲ,ನೀವು ಹೇಳಿದೆಲ್ಲಾ ಸರಿ,ಬೇರೆಯವರು ಹೇಳಿದ್ದು ತಪ್ಪಾ ಎಂದು ದಂಡಿಸಿದರು. ಕೂಡಲೇ ಚೈತ್ರ ಕೊಟ್ಟೂರು ಎಂದಿನಂತೆ ಸಾರಿ ಕೇಳಿದರು.

ಪ್ರತಿದಿನ ಅಪ್ಡೇಟ್ ವಿಷಗಳನ್ನು ಪಡೆಯಲು ಮರೆಯದೆ ನಮ್ಮ ಪುಟವನ್ನು ಲೈಕ್ ಮಾಡಿ ಹಾಗು ನಮ್ಮಲ್ಲಿ ತಿಳಿಯುವಂತ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here